ಹರಿಹರ ತಾಲ್ಲೂಕು ಮಾದಿಗ ಸಮಾಜ ಸಂಘದ ಅಧ್ಯಕ್ಷರಾಗಿ ಆನಂದ್

ಹರಿಹರ ತಾಲ್ಲೂಕು ಮಾದಿಗ ಸಮಾಜ ಸಂಘದ ಅಧ್ಯಕ್ಷರಾಗಿ ಆನಂದ್

ಹರಿಹರ, ಡಿ. 5- ಹರಿಹರ ತಾಲ್ಲೂಕು ಮಾದಿಗ ಸಮಾಜದ ವತಿಯಿಂದ ಸಮಾಜಮುಖಿ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳುವ ಹಿನ್ನೆಲೆಯಲ್ಲಿ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು  ಸಮಾಜದ ಅಧ್ಯಕ್ಷ ಎಂ.ಎಸ್. ಆನಂದಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಂಘದ ಗೌರವ ಅಧ್ಯಕ್ಷರಾಗಿ ಎಲ್.ಬಿ. ಹನುಮಂತಪ್ಪ, ಅಧ್ಯಕ್ಷರಾಗಿ ಎಂ.ಎಸ್. ಆನಂದ್, ಕಾರ್ಯಧ್ಯಕ್ಷರಾಗಿ ಜಿ.ಹೆಚ್. ಸಿದ್ಧರೂಢ, ಉಪಾಧ್ಯಕ್ಷರಾಗಿ ಹನುಮಂತಪ್ಪ ದೊಡ್ಡಮನೆ, ಪಿ.ಎನ್  ವಿರುಪಾಕ್ಷಪ್ಪ, ಎಂ.ಎಸ್  ಶ್ರೀನಿವಾಸ್, ಕಾರ್ಯದರ್ಶಿ ಹೆಚ್. ಶಿವಪ್ಪ, ಖಜಾಂಚಿ ಎ. ಪರಶುರಾಮ್, ನಿರ್ದೇಶಕರಾಗಿ ಬಿ.ಡಿ. ಬಸವರಾಜಪ್ಪ, ಹೆಚ್.ಎಂ. ಹನುಮಂತಪ್ಪ, ಎ.ಕೆ. ನಾಗೇಂದ್ರಪ್ಪ, ಆರ್. ಮಂಜುನಾಥ್, ಎನ್.ಕೆ. ಪ್ರಕಾಶ್, ಚೌಡಪ್ಪ ಮೇಗಳಮನೆ, ಎ.ಕೆ. ದಾಸಪ್ಪ ಅವರನ್ನು ನೇಮಿಸಲಾಗಿದೆ ಎಂದು ಹೇಳಿದರು.

ಸಮಾಜವನ್ನು ಆರ್ಥಿಕ,  ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಮುಂದೆ ತರುವ ನಿಟ್ಟಿನಲ್ಲಿ ಈಗಾಗಲೇ ಹಲವಾರು ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜೊತೆಗೆ ಕಳೆದ ಬಾರಿ 12 ಜೊತೆ ಸಾಮೂಹಿಕ ವಿವಾಹ ಮಹೋತ್ಸವ ಮಾಡಲಾಗಿದೆ. ಆ ಮೂಲಕ ಸಮಾಜದ ಶೋಷಿತರ ಬದುಕಿಗೆ ಸಂಘವು ಸೇವೆ ಸಲ್ಲಿಸುತ್ತಾ ಬಂದಿದ್ದು, ಈ ಬಾರಿ ಕೂಡ ಸಾಮೂಹಿಕ ವಿವಾಹ ಮಹೋತ್ಸವ ಆಚರಣೆ ಮಾಡಬೇಕೆಂಬ ಉದ್ದೇಶದಿಂದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಆನಂದಕುಮಾರ್ ತಿಳಿಸಿದರು. ಗೌರವ ಅಧ್ಯಕ್ಷ ಎಲ್.ಬಿ. ಹನುಮಂತಪ್ಪ ಮಾತನಾಡಿದರು.

ಈ ಸಂದರ್ಭದಲ್ಲಿ ಕಾರ್ಯಾಧ್ಯಕ್ಷ ಜಿ.ಹೆಚ್. ಸಿದ್ಧಾರೂಢ, ಕಾರ್ಯದರ್ಶಿ ಹೆಚ್. ಶಿವಪ್ಪ, ಉಪಾಧ್ಯಕ್ಷ ಎಂ.ಎಸ್.‌ ಶ್ರೀನಿವಾಸ್, ನಿರ್ದೇಶಕ ನಾಗೇಂದ್ರಪ್ಪ ರಾಜನಹಳ್ಳಿ ಇತರರು ಹಾಜರಿದ್ದರು. 

error: Content is protected !!