ಜಗಳೂರು, ಡಿ.4- ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಿಜೆಪಿ ಮೂಲ ಕಾರ್ಯಕರ್ತರ ಸಭೆ ನಡೆಯಿತು, ಸಭೆಯಲ್ಲಿ ಹುಲಿಕುಂಟ ಶೆಟ್ಟಿ, ಮಂಜುನಾಥ ಸಾಹುಕಾರ್, ಓ. ಬಾಬುರೆಡ್ಡಿ ಕೃಷ್ಣಮೂರ್ತಿ, ಪುರುಷೋತ್ತಮ ನಾಯಕ್, ಹೆಚ್.ಎಂ.ನಾಗರಾಜ, ಬಿ.ಎಸ್. ಪ್ರಕಾಶ್, ಕೆ.ಎಂ.ನಾಗೇಂದ್ರಯ್ಯ, ಇ.ಎನ್.ಪ್ರಕಾಶ್, ಲೋಕಣ್ಣ, ಕಲ್ಲಪ್ಪ ಕೆ.ಟಿ., ಇನ್ನೂ ಮುಂತಾದವರು ಪಾಲ್ಗೊಂಡಿದ್ದರು.
ಸಂಸದರು ಮತ್ತು ಶಾಸಕರು ಕಾರ್ಯಕರ್ತರನ್ನು ಕಡೆಗಣಿಸಿದ ಕಾರಣ ಕಳೆದ ಚುನಾವಣೆಯಲ್ಲಿ ಸೋಲು ಅನುಭವಿಸಿಬೇಕಾಯಿತು ಎಂದು ತಮ್ಮ ನೋವು ತೋಡಿಕೊಂಡರು.
ಇದೇ ಸಂದರ್ಭದಲ್ಲಿ ಮೂಲ ಬಿಜೆಪಿ ಕಾರ್ಯಕರ್ತರ ತಾಲ್ಲೂಕು ಸಮಿತಿ ರಚಿಸಲಾ ಯಿತು, ಗೌರವ ಅಧ್ಯಕ್ಷರಾಗಿ ಮಂಜುನಾಥ್ ಸಾಹುಕಾರ್, ಅಧ್ಯಕ್ಷರಾಗಿ ಬಾಬುರೆಡ್ಡಿ, ಪ್ರಧಾನ ಕಾರ್ಯದರ್ಶಿ ಆಗಿ ಕೃಷ್ಣಮೂರ್ತಿ ಇವರುಗಳನ್ನು ಆಯ್ಕೆ ಮಾಡಲಾಯಿತು. ಸಭೆಯ ಅಧ್ಯಕ್ಷತೆಯನ್ನು ಆವರಗೊಳ್ಳದ ಷಣ್ಮುಖಯ್ಯ ವಹಿಸಿದ್ದರು. ಸಭೆಯನ್ನು ಉದ್ದೇಶಿಸಿ ಎಂ.ಪಿ.ಕೃಷ್ಣಮೂರ್ತಿ ಪವಾರ್, ಹೆಚ್.ಎಸ್.ಲಿಂಗರಾಜ್ ಮಾತನಾಡಿದರು.
ಮೂರು ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಭಾರಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿ ಜಗಳೂರು ಗಾಂಧಿ ಸರ್ಕಲ್‌ನಲ್ಲಿ ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಲಾಯಿತು. ನಿವೃತ್ತ ಡಿವೈಎಸ್ಪಿ ಶೇಖರಪ್ಪ ಸಭೆಯಲ್ಲಿ ಉಪಸ್ಥಿತರಿದ್ದರು.