ಪವರ್‍ಗ್ರಿಡ್ ರೂ.1.63 ಕೋಟಿ ಸಿಎಸ್‍ಆರ್ ನಿಧಿಯಡಿ ಬಿಸಿ ನೀರು ಪೂರೈಕೆಗೆ ಜಿಲ್ಲಾಧಿಕಾರಿಗಳೊಂದಿಗೆ ಒಡಂಬಡಿಕೆ

ಪವರ್‍ಗ್ರಿಡ್ ರೂ.1.63 ಕೋಟಿ ಸಿಎಸ್‍ಆರ್ ನಿಧಿಯಡಿ ಬಿಸಿ ನೀರು ಪೂರೈಕೆಗೆ ಜಿಲ್ಲಾಧಿಕಾರಿಗಳೊಂದಿಗೆ ಒಡಂಬಡಿಕೆ

ದಾವಣಗೆರೆ, ಡಿ.4- ಪವರ್‍ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಸಂಸ್ಥೆಯಿಂದ ಸಿಎಸ್‍ಆರ್ ನಿಧಿಯಡಿ ಜಿಲ್ಲೆಯ ಬಾಲಕಿಯರ ಬಾಲ ಮಂದಿರ, ರಾಜ್ಯ ಮಹಿಳಾ ಹಾಸ್ಟೆಲ್, ಇಎಸ್‍ಐ ಆಸ್ಪತ್ತೆಯಲ್ಲಿ ಬಿಸಿ ನೀರು ಪೂರೈಕೆ ಮಾಡಲು 1.63 ಕೋಟಿ ರೂ. ಕಾಮಗಾರಿಗೆ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಹಾಗೂ ಪವರ್ ಗ್ರಿಡ್ ಕಂಪನಿಯ ಜನರಲ್ ಮ್ಯಾನೇಜರ್ ಹರೀಶ್ ನಾಯರ್ ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಒಡಂಬಡಿಕೆಗೆ ಸಹಿ ಹಾಕಿದರು. 

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಈಗಾಗಲೇ ಪವರ್‍ಗ್ರಿಡ್ ಕಾರ್ಪೊರೇಷನ್ ಸಂಸ್ಥೆಯಿಂದ ವಿವಿಧ 4 ಕಾಮಗಾರಿಗಳಿಗೆ ಒಟ್ಟು ಈ ವರ್ಷ 15 ಕೋಟಿ ರೂ. ಮೊತ್ತಕ್ಕೆ ಒಡಂಬಡಿಕೆ ಮಾಡಿಕೊಂಡು ಅನುಷ್ಟಾನ ಮಾಡಲಾಗುತ್ತಿದೆ. ಬರುವ 2024 ರ ಮಾರ್ಚ್ ಅಂತ್ಯದೊಳಗೆ ಈ ಎಲ್ಲಾ ಕಾಮಗಾರಿಗಳನ್ನು ಅನುಷ್ಟಾನ ಮಾಡುವ ಮೂಲಕ ಉಪಯುಕ್ತತಾ ಪ್ರಮಾಣ ಪತ್ರ ನೀಡಬೇಕಾಗಿದೆ. 

ಈ ನಿಟ್ಟಿನಲ್ಲಿ ಇಲಾಖೆಯವರು ಕಾಲಮಿತಿಯಲ್ಲಿ ಸಿವಿಲ್ ಕಾಮಗಾರಿ ಮತ್ತು ಪೂರೈಕೆ ಮಾಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಜಿಲ್ಲಾ ಸರ್ಜನ್ ಮತ್ತು ಕೆಆರ್‍ಡಿಎಲ್ ಇಂಜಿನಿಯರ್‍ಗೆ ಸೂಚನೆ ನೀಡಿದರು. 

ಈ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಷಣ್ಮುಖಪ್ಪ, ಜಿಲ್ಲಾ ಸರ್ಜನ್ ಡಾ. ನಾಗೇಂದ್ರಪ್ಪ ಉಪಸ್ಥಿತರಿದ್ದರು.

error: Content is protected !!