ಮಲೇಬೆನ್ನೂರು, ಡಿ.3- ಇಲ್ಲಿನ ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಸಂಸ್ಥೆ ವತಿಯಿಂದ ದಾಸ ಶ್ರೇಷ್ಠ ಶ್ರೀ ಭಕ್ತ ಕನಕದಾಸರ 536ನೇ ಜಯಂತ್ಯೋತ್ಸವದ ಅಂಗವಾಗಿ ಭಾನುವಾರ ಕನಕದಾಸರ ಪ್ರತಿಮೆಯ ಶೋಭಾಯಾತ್ರೆ ಸಂಭ್ರಮದಿಂದ ಜರುಗಿತು.
ಹೊರ ಬೀರಪ್ಪನ ಗುಡಿಯಿಂದ ಪ್ರಾರಂಭವಾದ ಶೋಭಾಯಾತ್ರೆಗೆ ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಇನ್‌ಸೈಟ್ ಸಂಸ್ಥಾಪಕ ಜಿ.ಬಿ. ವಿನಯಕುಮಾರ್ ಮತ್ತು ಎಪಿಎಂಸಿ ಮಾಜಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್, ತಾ.ಪಂ. ಮಾಜಿ ಅಧ್ಯಕ್ಷ ಎಸ್.ಜಿ. ಪರಮೇಶ್ವರಪ್ಪ ಅವರು ಪುಷ್ಪಾರ್ಚನೆ ಮೂಲಕ ಚಾಲನೆ ನೀಡಿದರು.
ಜಿಗಳಿ ವೃತ್ತ, ಮುಖ್ಯರಸ್ತೆ, ಹಳೇ ಊರಿನಲ್ಲಿ ಸಂಚರಿಸಿದ ಶೋಭಾಯಾತ್ರೆಯಲ್ಲಿ ಯುವಕರು ಭಾಗವಹಿಸಿ, ಡಿಜೆ ಸಂಗೀತ ನೃತ್ಯಕ್ಕೆ ಕುಣಿದು ಸಂಭ್ರಮಿಸಿದರು.
ಮುಖ್ಯ ವೃತ್ತದ ಬಳಿ ಕನಕದಾಸರ ಪ್ರತಿಮೆಗೆ ರಾಜ ವೀರಮದಕರಿ ನಾಯಕ ಸೇವಾ ಸಮಿತಿ ವತಿಯಿಂದ ದೊಡ್ಮನಿ ಬಸವರಾಜ್, ಕಜ್ಜರಿ ಹರೀಶ್, ಯಶವಂತ್, ಕಿರಣ್ ಮತ್ತಿತರರು ಬೃಹತ್ ಮಾಲಾರ್ಪಣೆ ಮಾಡಿ ಸಾಮರಸ್ಯ ಮೆರೆದರು.