ಕೀರ್ತನೆಗಳ ಮೂಲಕ ಮೌಢ್ಯ, ಜಾತಿ ಹೋಗಲಾಡಿಸಲು ಪ್ರಯತ್ನಿಸಿದ್ದ ಕನಕದಾಸರು

ಕೀರ್ತನೆಗಳ ಮೂಲಕ ಮೌಢ್ಯ, ಜಾತಿ ಹೋಗಲಾಡಿಸಲು ಪ್ರಯತ್ನಿಸಿದ್ದ ಕನಕದಾಸರು

ಹರಪನಹಳ್ಳಿ ಕಾರ್ಯಕ್ರಮದಲ್ಲಿ ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ್

ಹರಪನಹಳ್ಳಿ, ನ.30- ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಮೌಢ್ಯ, ಜಾತಿ ಹೋಗಲಾಡಿಸಲು ಪ್ರಯತ್ನಿಸಿದ್ದರು ಎಂದು ಶಾಸಕರಾದ ಶ್ರೀಮತಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಮೆಚ್ಚುಗೆ ವ್ಯಕ್ತಪಡಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯ್ತಿಯ ಸಾಮರ್ಥ್ಯ ಸೌಧದಲ್ಲಿ ತಾಲ್ಲೂಕು ಆಡಳಿತದಿಂದ ಆಯೋಜಿಸಿದ್ದ ಕನಕದಾಸರ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕನಕದಾಸರ ಪದಗಳನ್ನು ಅರ್ಥ ಮಾಡಿಕೊಂಡು, ಜಾತೀಯತೆ ಬಿಟ್ಟು ಮಾನವತಾ ಗುಣ ಬೆಳೆಸಿಕೊಳ್ಳಬೇಕು ಎಂದರು.

ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ್ ಮಾತನಾಡಿ, ದಾಸ ಸಾಹಿತ್ಯ ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಸಹಕಾರಿ ಎಂದ ಅವರು, ಕನಕದಾಸರ ಕೀರ್ತನೆಗಳು ಇಂದಿಗೂ ಪ್ರಸ್ತುತ ಎಂದು ನುಡಿದರು.

ಉಪನ್ಯಾಸ ನೀಡಿದ ವಿಶ್ರಾಂತ ಪ್ರಾಧ್ಯಾಪಕ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿಯವರು ಕನ್ನಡ ಸಾಹಿತ್ಯ ಲೋಕದಲ್ಲಿ ಚತುರ್ಮುಖ ವ್ಯಕ್ತಿತ್ವ ಹೊಂದಿದ್ದ ಏಕೈಕ ವ್ಯಕ್ತಿ ಕನಕದಾಸರು ಎಂದು ಹೇಳಿದರು. ಪ್ರತಿಯೊಬ್ಬರೂ, ಪ್ರತಿಯೊಬ್ಬರಿಗೂ ಬಾಗಿಲನ್ನು ತೆರೆದುಕೊಂಡು ಮಾನವತೆಯ ತೋರಣ ಕಟ್ಟಬೇಕು. ಇದರಿಂದ ಮಹಾನ್ ವ್ಯಕ್ತಿಗಳ ಜಯಂತಿ ಆಚರಣೆ ಸಾರ್ಥಕವಾಗುತ್ತದೆ. ದಾರ್ಶನಿಕರು ಸಮಾಜದ ಸ್ವತ್ತು, ಅವರ ಆದರ್ಶಗಳನ್ನು ಪಾಲಿಸೋಣ ಎಂದರು. 

ತಹಶೀಲ್ದಾರ್‌ ಬಿ.ವಿ.ಗಿರೀಶ್‌ಬಾಬು, ತಾ.ಪಂ ಇಒ ಕೆ.ಆರ್.ಪ್ರಕಾಶ್‌, ಬಿಇಒ ಬಸವರಾಜಪ್ಪ, ಪುರಸಭಾ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ್‌, ಪುರಸಭಾ ಸದಸ್ಯರುಗಳಾದ ಎಂ.ವಿ.ಅಂಜಿನಪ್ಪ, ಲಾಟಿ ದಾದಾಪೀರ್‌, ಉದ್ದಾರ ಗಣೇಶ್‌, ಮಂಜುನಾಥ ಇಜಂತಕರ್, ಕುರುಬ ಸಮಾಜದ ಅಧ್ಯಕ್ಷ ಗೋಣಿಬಸಪ್ಪ, ಮುಖಂಡರಾದ ಎಚ್.ಬಿ.ಪರಶುರಾಮಪ್ಪ, ಎಚ್.ವಸಂತಪ್ಪ, ಕಲ್ಲೇರ ಬಸವರಾಜಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ರಾಮಪ್ಪ, ಚಿಕ್ಕೇರಿ ಬಸಪ್ಪ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ರೇಣುಕಾದೇವಿ, ಇಸಿಒ ಗಿರಜ್ಜಿ ಮಂಜುನಾಥ, ಎಇಇ ನಾಗಪ್ಪ ಇತರರು ಹಾಜರಿದ್ದರು.

error: Content is protected !!