ಹೊನ್ನಾಳಿ, ನ. 30 – ತಾಲ್ಲೂಕಿನ ಹೆಚ್. ಕಡದಕಟ್ಟೆ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾಗಿ ಹೊಳೆ ಮಾದಾಪುರ ಗ್ರಾಮದ ಡಿ.ಶಶಿಕಲಾ ಮಾಲತೇಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿದ್ದ ಎಂ.ಡಿ. ಹನುಮಂತಪ್ಪ ಅವರ ರಾಜೀಮೆಯಿಂದ ತೆರವಾದ ಸ್ಥಾನಕ್ಕೆ ಇಂದು ಚುನಾವಣೆ ನಡೆದು, ಯಾರೂ ನಾಮಪತ್ರ ಸಲ್ಲಿಸದ ಕಾರಣ ಡಿ. ಶಶಿಕಲಾ ಮಾಲತೇಶ್ ಅವರು ಉಪಾಧ್ಯಕರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ವಲಯ ಅರಣ್ಯ ವಲಯ ಅರಣ್ಯಾಧಿಕಾರಿ ಡಿ.ಎಂ. ಷಣ್ಮುಖ ಘೋಷಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಎ.ಹೆಚ್. ಪವಿತ್ರ ಗಣೇಶ್, ಸದಸ್ಯರಾದ ಹನುಮಂತಮ್ಮ, ಎಂ. ಮಂಜುನಾಥ, ಬಿ.ಹೆಚ್. ಕುಮಾರ್, ಎ.ಎಂ. ರಾಜೇಶ್, ಪಿಡಿಓ ಹೆಚ್ ವೃ. ಹೊನ್ನಪ್ಪ, ಕಾರ್ಯದರ್ಶಿ ಬಿ. ಮಲ್ಲೇಶಪ್ಪ, ಸಿಬ್ಬಂದಿಗಳಾದ ಸಣ್ಣಬಸಪ್ಪ, ಡಿ.ಹೆಚ್.ಮಲ್ಲಿಕಾರ್ಜುನ್, ಹೆಚ್. ದಯಾನಂದ್, ಸಿ. ಪರಮೇಶ್ವರಪ್ಪ, ಬಿ.ಜಿ. ಶಿವರಾಜ್, ಬಿ.ಈ. ಚನ್ನಪ್ಪ, ಮುಖಂಡರಾದ ಕಡದಕಟ್ಟೆ ಮಂಜಪ್ಪ, ಹೊಳೆ ಮಾದಾಪುರ ಗ್ರಾಮದ ಮಾಲತೇಶ್, ಚಿಕ್ಕಪ್ಪ, ಲೋಕೇಶ್ ಮತ್ತಿತರರು ಇದ್ದರು.