ಸರ್ಕಾರದ ಸೌಲಭ್ಯಗಳ ಪ್ರಯೋಜನ ಪಡೆದು ರೈತರು ಸಬಲರಾಗಬೇಕು

ಸರ್ಕಾರದ ಸೌಲಭ್ಯಗಳ ಪ್ರಯೋಜನ ಪಡೆದು ರೈತರು ಸಬಲರಾಗಬೇಕು

ಹರಪನಹಳ್ಳಿ ಶಾಸಕರಾದ ಎಂ.ಪಿ. ಲತಾ ಮಲ್ಲಿಕಾರ್ಜುನ್ ಆಶಯ

ಹರಪನಹಳ್ಳಿ, ನ. 26 – ರೈತರು ಸರ್ಕಾರದ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳುವ  ಮೂಲಕ ಸಬಲರಾಗಬೇಕು ಎಂದು ಶಾಸಕರಾದ ಎಂ.ಪಿ. ಲತಾ ಮಲ್ಲಿಕಾರ್ಜುನ್ ಹೇಳಿದರು.

ಪಟ್ಟಣದ ಸಹಾಯಕ  ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ  ಪ್ರಧಾನಿ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಹಾಗೂ ಅಟಲ್ ಭೂ ಜಲ ಯೋಜನೆ ಅಡಿ  ತುಂತುರು ನೀರಾವರಿ  ಘಟಕ ಯೋಜನೆ  ಅಡಿ ರೈತರಿಗೆ ಪೈಪುಗಳನ್ನು ವಿತರಿಸಿ ಅವರು  ಮಾತನಾಡಿದರು.

ರೈತರು ನೀರಾವರಿ ಭೂಮಿಗಳಲ್ಲಿ 15 ರಿಂದ 20 ಜನ ಒಂದೇ ಟಿಸಿಯಲ್ಲಿ ಕರೆಂಟು ಅಳವಡಿಸಿಕೋಂಡು ಟಿಸಿ ಸುಟ್ಟು ಹೋಗಿವೆ. ಅದರೆ ಪ್ರತಿಯೊಬ್ಬ ರೈತರಿಗೂ ಪ್ರತ್ಯೇಕ ಟಿಸಿ ಅಳವಡಿಸಿಕೊಂಡರೆ ಟಿಸಿ ಸುಡುವುದಿಲ್ಲ ಮತ್ತು ವಿದ್ಯುತ್ ಬಳಕೆ ಕಡಿಮೆ ಮಾಡಿ ಸೌರವಿದ್ಯುತ್ ಬಳಿಕೆ ಜಾಸ್ತಿ ಮಾಡಿ ಎಂದು ಸಲಹೆ ನೀಡಿದರು.

ರೈತರೇ  ಈ ದೇಶದ ಬೆನ್ನಲುಬು ಆಗಿದ್ದು ರೈತರು ಪ್ರತಿವರ್ಷ ಒಂದೇ ಬೆಳೆ ಬೆಳೆ ಬೆಳೆಯುವ ಬದಲು  ಸಮಿಶ್ರ ಬೆಳೆ ಬೆಳೆಯುವ ಮೂಲಕ  ವೈಜ್ಞಾನಿಕ ವಾಗಿ ಬೆಳೆ ಬೆಳೆದು ಹೆಚ್ಚಿನ ಲಾಭ ಪಡೆದು ಕೊಳ್ಳಿ ಎಂದರು.

ಈ ವೇಳೆ ಸಹಾಯಕ  ಕೃಷಿ ನಿದರ್ಶಕ ವಿ.ಸಿ. ಉಮೇಶ, ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ರಾಗಿಮಸಲವಾಡದ  ರೇವಣಸಿದ್ದಪ್ಪ. ಸದಸ್ಯ ಮಡಿವಾಳಪ್ಪ. ಕೃಷಿ ಅಧಿಕಾರಿ  ನಾಗರಾಜ. ಧರಣೇಂದ್ರ ಕುಮಾರ, ಸಂತೋಷ ಸೇರಿದಂತೆ ಇತರರು ಇದ್ದರು.

error: Content is protected !!