ರಾಣೇಬೆನ್ನೂರು, ನ.24- ನಗರದ ದೇವಾಂಗ ಸಮಾಜ, ನೌಕರರ ಸಂಘ, ಯುವಕ ಸಂಘ ಹಾಗೂ ಮಹಿಳಾ ಸಂಘ ಜಂಟಿಯಾಗಿ ಇಂದು ಶ್ರೀ ದೇವಾಂಗ ದೇವಲ ಮಹರ್ಷಿ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಿದರು.
ಇಲ್ಲಿನ ಕುದುರಿಗಲ್ಲಿ ಶ್ರೀ ಬನಶಂಕರಿ ದೇವಸ್ಥಾನದಿಂದ ಹೊರಟ ಮಹರ್ಷಿ ಉತ್ಸವವು ಕುರುಬಗೇರಿ, ಎಂ.ಜಿ.ರಸ್ತೆ ದೊಡ್ಡ ಪೇಟೆಯಲ್ಲಿ ಹಾಯ್ದು ಕುಂಬಾರ ಓಣಿಯ ಶ್ರೀ ರಾಮಲಿಂಗ ಮಠಕ್ಕೆ ಆಗಮಿಸಿ ಅಲ್ಲಿ ನಡೆದ ಸ್ವಾಮಿಯ ವಿಶೇಷ ಪೂಜೆ ಹಾಗೂ ಮುತ್ತೈದೆಯರಿಗೆ ಉಡಿ ತುಂಬುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಾಯಿತು.
ಡಾ.ಬಸವರಾಜ ಕೇಲಗಾರ, ಶಾರದಾ ಆನವೇರಿ, ಬಸವರಾಜ ಲಕ್ಷ್ಮೇಶ್ವರ, ಗಣೇಶ ಸಿರಗೂರ, ಸಂಕಪ್ಪ ಮಾರನಾಳ, ಕರಬಸಪ್ಪ ನೀಲಗುಂದ, ಲಕ್ಷ್ಮಿಕಾಂತ ಹುಲಗೂರ, ಹನಮಂತಪ್ಪ ಹೆದ್ದೇರಿ, ಅಶೋಕ ದುರ್ಗದ ಸೀಮಿ, ಗಿರೀಶ ಗುಳೇದಗುಡ್ಡ, ಗಣೇಶ ಲಕ್ಷ್ಮೇಶ್ವರ, ಬಸವರಾಜ ಮೈಲಾರ ಮತ್ತಿತರರಿದ್ದರು.