ರಾಣೇಬೆನ್ನೂರು, ನ.22- ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಹೆಚ್.ಕಾಂತರಾಜು ವರದಿ ಪರೀಕ್ಷಿಸಿ, ಸಾಮಾಜಿಕ ನ್ಯಾಯ ನೀಡುವ ಬದ್ದತೆಯೊಂದಿಗೆ ಅಧಿಕಾರ ಹಿಡಿದಿರುವ ರಾಜ್ಯ ಸರ್ಕಾರ ಈ ಕೂಡಲೇ ಕಾರ್ಯೋನ್ಮುಖವಾಗ ಬೇಕು ಎಂದು ರಾಣೇಬೆನ್ನೂರು ಅಹಿಂದ ಸಂಘಟನೆ ಬೃಹತ್ ಪ್ರತಿಭಟನೆಯೊಂದಿಗೆ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
ಅನೇಕ ಹಿಂದುಳಿದ ವರ್ಗಗಳ ಆಯೋಗಗಳು ವೈಜ್ಞಾನಿಕ ಅಧ್ಯಯನಗಳನ್ನು ನಡೆಸಿ, ಮೀಸಲಾತಿಯನ್ನು ಅಚ್ಚುಕಟ್ಟಾಗಿ ಜಾರಿ ಮಾಡಿದ್ದರೂ ಕೂಡ ರಾಜಕೀಯ ತೀರ್ಮಾನ ಗಳಿಂದ ಶೋಷಿತರ ಪಾಲು ಬಲಾಢ್ಯ ರಿಗೆ ಹಂಚಿಹೋಗು ತ್ತಿವೆ. ಕಾರಣ ಭಾರತದ ಸಂವಿ ಧಾನದ ಆಶಯ ಗಳಂತೆ ಅವಕಾಶ ವಂಚಿತರಿಗೆ ಅನ್ಯಾ ಯವಾಗುತ್ತಿರುವ ಬಗ್ಗೆ ಅಹಿಂದ ಅಸಮಾಧಾನ ವ್ಯಕ್ತಪಡಿಸಿದೆ.
ಎರಡು ದಶಕಗಳಿಂದ ಮೀಸಲಾತಿಯಲ್ಲಿ ಅನೇಕ ಆದೇಶಗಳು ಆಗುತ್ತಾ ಬಂದಿದ್ದು, ಆ ಎಲ್ಲಾ ವಿಷಯಗಳನ್ನು ಪರೀಶೀಲಿಸಿ ಸಾಮಾಜಿಕ ನ್ಯಾಯದ ಸೂತ್ರದಂತೆ ಅಸಮತೋಲನದ ಅನ್ಯಾಯಗಳನ್ನು ತಪ್ಪಿಸಲು ಹೆಚ್. ಕಾಂತರಾಜು ವರದಿಯನ್ನು ಜಾರಿಗೊಳಿಸುವಂತೆ ಮನವಿಯಲ್ಲಿ ಸರ್ಕಾರಕ್ಕೆ ಒತ್ತಾಯಿಸಲಾಗಿದೆ.
ಕುರುಬರ ಸಂಘದ ಅಧ್ಯಕ್ಷ ಷಣ್ಮುಖಪ್ಪ ಕಂಬಳಿ, ರೈತ ಮುಖಂಡ ಹನುಮಂತಪ್ಪ ಕಬ್ಬಾರ, ನಗರಸಭೆ ಸದಸ್ಯ ರಮೇಶ್ ಕರಡೇರ, ಕಿರಣ ಗೂಳೇರ, ಪ್ರವೀಣ ಸಣ್ಣ ನೀಲಪ್ಪನವರ್, ರಮೇಶ ಐರಣಿ, ನಾಗರಾಜ್ ಐರಣಿ, ಮೃತ್ಯುಂಜಯ ಗುದಿಗೇರ ಮತ್ತಿತರರಿದ್ದರು.