ಹರಿಹರ,, ನ. 20 – ಹಣದಿಂದ ಎಲ್ಲವನ್ನೂ ಗಳಿಸ ಬಹುದು, ಆದರೆ ಹಣ ಮಾತ್ರವೇ ಬದುಕಿನ ಎಲ್ಲವೂ ಅಲ್ಲ. ಶ್ರೀಮಂತಿಕೆ ಗಿಂತ ಆರೋಗ್ಯ ಭಾಗ್ಯವೇ ಬದುಕಿ ನಲ್ಲಿ ಎಲ್ಲದಕ್ಕಿಂತ ಮುಖ್ಯ ಎಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಪ್ರೀತಿ ಆರೈಕೆ ಟ್ರಸ್ಟ್ ಕಾರ್ಯದರ್ಶಿ ಡಾ. ರವಿಕುಮಾರ್ ಟಿ.ಜಿ ಹೇಳಿದರು.
ಹರಿಹರ ತಾಲ್ಲೂಕಿನ ಕುಂದೂರಿನ ಶ್ರೀ ಆಂಜನೇಯ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಆರೋಗ್ಯ ಉಚಿತ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಕುಟುಂಬ, ಊರು, ದೇಶ ಇನ್ನಷ್ಟು ಅಭಿವೃದ್ಧಿ ಆಗಬೇಕು ಎಂದು ನಾವೆಲ್ಲರೂ ಬಯಸುತ್ತೇವೆ. ಆದರೆ, ಅಭಿವೃದ್ಧಿ ಮಾಡಬೇಕಾದ ನಾಗರಿಕರೇ ಅನಾರೋಗ್ಯ ಪೀಡಿತರಾದಾಗ ವೈಯುಕ್ತಿವಾಗಿ ಮತ್ತು ಸಾಮಾಜಿಕವಾಗಿ ಅಭಿವೃದ್ಧಿಗೆ ಹಿನ್ನಡೆ ಆಗಲಿದೆ. ಇದನ್ನು ಮನಗಂಡು ಪ್ರೀತಿ ಆರೈಕೆ ಟ್ರಸ್ಟ್ ವತಿಯಿಂದ ಆರೋಗ್ಯದ ಕಾಳಜಿ, ಅರಿವು ಮೂಡಿಸುವ ಪ್ರಯತ್ನವನ್ನು ಆರಂಭಿಸಿದ್ದೇವೆ ಎಂದು ಹೇಳಿದರು.
ಗ್ರಾ.ಪಂ. ಅಧ್ಯಕ್ಷರಾದ ಶ್ರೀಮತಿ ರೇಖಾ ರೇವಣಸಿದ್ದಪ್ಪ ಮಾತ ನಾಡಿದರು. ಶಿಬಿರಕ್ಕೆ ಗ್ರಾ.ಪಂ. ಉಪಾಧ್ಯಕ್ಷ ಚಿದಾನಂದಮೂರ್ತಿ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶಿಬಿರದಲ್ಲಿ ಉದ್ಯಮಿ ನಾಗರಾಜಸ್ವಾಮಿ, ವೈದ್ಯರಾದ ಡಾ. ಶಾಹಿದ್, ಎಚ್.ಕೆ. ರೂಪಾ, ಟ್ರಸ್ಟ್ ಸಿಬ್ಬಂದಿಗಳಾದ ಶಿವರಾಮ್, ನಾಗರಾಜ್, ರವಿಕುಮಾರ್, ಕಲ್ಲೇಶ್, ಪ್ರಕಾಶ್, ಮಹೇಂದ್ರ, ವಿಜಯ್, ವಿನೋದ್, ಕಿರಣ್, ರಾಜ್ ಸಾಬ್, ಎಚ್.ಡಿ.ಕುಮಾರ್ ಇದ್ದರು. ಪ್ರೀತಿ ಆರೈಕೆ ಟ್ರಸ್ಟ್ ಆಯೋಜಿಸಿದ್ದ ಆರೋಗ್ಯ ಶಿಬಿರಕ್ಕೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು ಆಗಮಿಸಿ, ಶುಭ ಹಾರೈಸಿದರು.