ರೇಣುಕಾ ಮಂದಿರ ಎದುರಿನ ರಸ್ತೆಯ ಡಿವೈಡರ್‌ ತೆರವು ಮಾಡಿದ ಪೊಲೀಸ್‌

ರೇಣುಕಾ ಮಂದಿರ ಎದುರಿನ ರಸ್ತೆಯ ಡಿವೈಡರ್‌ ತೆರವು ಮಾಡಿದ ಪೊಲೀಸ್‌

ದಾವಣಗೆರೆ, ನ.20 – ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ನಗರದ ಪಿ.ಬಿ ರಸ್ತೆಯ ರೇಣುಕಾ ಮಂದಿರದ ಮುಂಭಾಗದಲ್ಲಿ ಅಳವಡಿಸಿದ್ದ ಡಿವೈಡ‌ರನ್ನು ಪೊಲೀಸರು ನಿನ್ನೆ ತೆರವುಗೊಳಿಸಿದರು.

ಈ ಜಾಗದಲ್ಲಿ ಪದೇ ಪದೇ ಅಪಘಾತಗಳಾಗಿ ಸಾವು ಸಂಭವಿಸಿದ್ದರಿಂದ ಪೊಲೀಸರು ಕಳೆದ ಕೆಲವು ತಿಂಗಳುಗಳ ಹಿಂದೆ ಡಿವೈಡರ್‌ನ್ನು ಅಳವಡಿಸಿದ್ದರು. ಡಿವೈಡರ್ ಅಳವಡಿಸಿದ್ದರಿಂದ ರಸ್ತೆ ದಾಟಬೇಕಾದರೆ ಚಿಕ್ಕ ಜಾಗದಲ್ಲಿ ಸಾಕಷ್ಟು ವಾಹನಗಳು ಹೋಗಲು ಸಾಧ್ಯವಾಗದೇ ಟ್ರಾಫಿಕ್ ಜಾಮ್ ಆಗುತ್ತಿತ್ತು. ಇಲ್ಲವೇ ಸಿಗ್ನಲ್‌ಗಳನ್ನು ದಾಟಿ ಬರಬೇಕಿದ್ದರಿಂದ ಬೆಳಿಗಿನ ಸಮಯದಲ್ಲಿ ಹಳೇ ದಾವಣಗೆರೆ ಕಡೆಯಿಂದ ಬರುತ್ತಿದ್ದ ಶಾಲಾ – ಕಾಲೇಜುಗಳ ವಿದ್ಯಾರ್ಥಿಗಳಿಗೆ, ಕೆಲಸಕ್ಕೆ ಹೋಗುವ ಸಾರ್ವಜನಿಕರಿಗೆ, ಆಂಬ್ಯುಲೆನ್ಸ್‌ಗಳಿಗೆ ತೊಂದರೆ ಆಗುತ್ತಿತ್ತು.

ಡಿವೈಡರ್ ಅಳವಡಿಸಿದಾಗ ಸ್ಥಳೀಯ ವರ್ತಕರು, ಆಟೋ ಚಾಲಕರು ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ನಂತರ ಅಂದಿನ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ ಅವರಿಗೆ ಮನವಿ ಸಲ್ಲಿಸಿ, ಡಿವೈಡರ್ ತೆರವುಗೊಳಿಸಲು ಮನವಿಯನ್ನು ಮಾಡಲಾಗಿತ್ತು.

ಈಗ ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಠಿಯಿಂದ ಪೊಲೀಸರು ಡಿವೈಡರ್‌ನ್ನು ತೆರವುಗೊಳಿಸಿದ್ದಾರೆ. ಇನ್ನಾದರೂ ಈ ಸ್ಥಳದಲ್ಲಿ ದಿನ ನಿತ್ಯ ಓಡಾಡುವ ಬೈಕ್‌, ಆಟೋ ಮತ್ತು ದೊಡ್ಡ ದೊಡ್ಡ ವಾಹನಗಳ ಚಾಲಕರು ಎಚ್ಚರಿಕೆಯಿಂದ ನಿಧನವಾಗಿ ಸಂಚರಿಸಬೇಕು.  ಎವಿಕೆ ಕಾಲೇಜಿನ ಒನ್ ವೇ ರಸ್ತೆಯಲ್ಲಿ ಬರುವುದನ್ನು ಬಿಡಬೇಕು ಎಂದು ಸ್ಥಳೀಯ ವರ್ತಕರು ಮನವಿ ಮಾಡಿದ್ದಾರೆ. 

ಡಿವೈಡರ್ ತೆರವುಗೊಳಿಸಿದ್ದರಿಂದ ಸಾಮಾಜಿಕ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್ ಅವರ ನೇತೃತ್ವದಲ್ಲಿ ಸ್ಥಳೀಯ ವರ್ತಕರು ಮತ್ತು ಆಟೋ ಚಾಲಕರು ಸೇರಿ ಇನ್ನು ಮುಂದೆ ಈ ಜಾಗದಲ್ಲಿ ಯಾವುದೇ ಅಪಘಾತಗಳು ಸಂಭವಿಸದಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಪೂಜೆಯನ್ನು ಸಲ್ಲಿಸಿದರು. 

ಈ ಸಂದರ್ಭದಲ್ಲಿ ಅಣ್ಣಪ್ಪಸ್ವಾಮಿ, ಮಂಜು, ಸಂಚಾರ ಪೊಲೀಸ್ ಇಲಾಖೆಯ ಪಿಎಸ್ಐ ಶೈಲಜಾ, ಸಿಬ್ಬಂದಿಗ ಳಾದ ಮಲ್ಲಿಕಾರ್ಜುನ ಕೆ. ನಾಗರಾಜ್, ಪ್ರಕಾಶ್ ಇದ್ದರು.

error: Content is protected !!