ಆರ್‌ಜಿಎಸ್, ನಿಶಾನಿಮಠ್‌ಗೆ ‘ಸಹಕಾರ ರತ್ನ’ ಪ್ರಶಸ್ತಿ ಪ್ರದಾನ

ಆರ್‌ಜಿಎಸ್, ನಿಶಾನಿಮಠ್‌ಗೆ  ‘ಸಹಕಾರ ರತ್ನ’ ಪ್ರಶಸ್ತಿ ಪ್ರದಾನ

ವಿಜಯಪುರ, ನ.20- ದಾವಣಗೆರೆಯ ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ನಿರಂಜನ್ ನಿಶಾನಿಮಠ್ ಮತ್ತು ಶ್ರೀ ಕನ್ಯಕಾಪರಮೇಶ್ವರಿ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ರಾಜನಹಳ್ಳಿ ಜಿ. ಶ್ರೀನಿವಾಸಮೂರ್ತಿ ಅವರುಗಳಿಗೆ `ಸಹಕಾರ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

 ಇಲ್ಲಿನ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಆವರಣದಲ್ಲಿ ಇಂದು ನಡೆದ 70ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಿದರು.

error: Content is protected !!