ದಾವಣಗೆರೆ, ನ.20- ನಗರದ ರಾಘವೇಂದ್ರ ವಿದ್ಯಾನಿ ಕೇತನ ಶಾಲೆಯಲ್ಲಿ 68ನೇ ಕನ್ನಡ ರಾಜ್ಯೋತ್ಸವವನ್ನು ಹಳ್ಳಿ ಸೊಗಡಿನ ದೃಷ್ಯಾವಳಿಗಳೊಂದಿಗೆ ವಿಶೇಷವಾಗಿ ಆಚರಿಸ ಲಾಯಿತು. ಸಂಸ್ಥೆಯ ಮುಖ್ಯಸ್ಥರಾದ ಮಂಜೂಷಾ, ಪ್ರಾಂಶುಪಾಲ ಎಂ.ಎಸ್. ಮಂಜುನಾಥ್, ಆಡಳಿತಾಧಿಕಾರಿ ಮೃತ್ಯುಂ ಜಯ ತಿಗಡಿಮಠ, ಶೈಕ್ಷಣಿಕ ಮಾರ್ಗದರ್ಶಕ ರಾದ ಭಾರತಿ ಮಳಿಮಠ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಮುಖ ಸಾಂಪ್ರದಾಯಿಕ ಕಸುಬುಗಳಾದ ಕುಂಬಾರಿಕೆ, ನೇಕಾರಿಕೆ, ಬಳೆಗಾರ, ಪಶುಸಂಗೋಪನೆ, ನಾಟಿ ವೈದ್ಯ ಪದ್ಧತಿ, ಹಳ್ಳಿಸಂತೆ, ಗುರುಕುಲ ಪದ್ಧತಿ ಶಾಲೆ, ಕುಟ್ಟುವ, ಬೀಸುವ, ಮಜ್ಜಿಗೆ ಕಡೆಯುವ, ಕಣದಲ್ಲಿ ರಾಶಿ ಮಾಡುವ ದೃಶ್ಯಾವಳಿಗಳು ನೋಡುಗರ ಮೆಚ್ಚುಗೆಗೆ ಪಾತ್ರವಾದವು. ಅಲ್ಲದೇ ಮಕ್ಕಳಿಂದ ಯಕ್ಷಗಾನ ವೇಷಭೂಷಣ, ಡೊಳ್ಳು ಕುಣಿತ, ಕೋಲಾಟ, ಮುಂತಾದ ಜಾನಪದ ಕಲಾಮೇಳ ಗಮನ ಸೆಳೆಯಿತು. ಶಿಕ್ಷಕಿ ಎನ್.ಎಂ ಆಶಾ ಕಾರ್ಯಕ್ರಮ ನಿರೂಪಿಸಿದರು.
January 22, 2025