ದಾವಣಗೆರೆ, ನ. 20- ನಗರದ ಶ್ರೀ ಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕಳಸ ಪ್ರತಿ ಷ್ಠಾಪನಾ ಕಾರ್ಯಕ್ರಮವು ಇಂದು ನೆರವೇರಿತು.
ಲಿಂಗೇಶ್ವರ ದೇವಸ್ಥಾನದ ಗರ್ಭಗುಡಿಯ ಮೇಲೆ ಕಳಸ ಪ್ರತಿಷ್ಠಾಪನೆ ಮಾಡಿ ಮಾತನಾಡಿದ ಹೆಬ್ಬಾಳು ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ, ಸಾವಿರಾರು ವರ್ಷಗಳ ಇತಿಹಾಸಿರುವ ಲಿಂಗೇಶ್ವರ ದೇಗುಲಕ್ಕೆ ಜಾತಿ, ಮತಗಳ ಭೇದವಿಲ್ಲದೇ ಭಕ್ತರು ಆಗಮಿಸಿ ಸ್ವಾಮಿ ಕೃಪೆಗೆ ಪಾತ್ರರಾಗುತ್ತಾರೆ ಎಂದು ಶ್ಲ್ಯಾಘಿಸಿದರು.
ಸಾವಿರಾರು ವರ್ಷಗಳ ಹಿಂದೆ ವರ್ತಕನೊಬ್ಬ ಇಲ್ಲಿಗೆ ಬಂದು ಕಲ್ಲಿನಲ್ಲಿ ಶಿವನನ್ನು ಕಂಡು ಪೂಜಿಸುತ್ತಾ ಬಂದಿದ್ದರು. ಇದೀಗ ಶಿವನ ಆರಾಧನೆಯನ್ನು ಮಾಡುವ ಶಕ್ತಿ ಕೇಂದ್ರವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಜ್ಜಂಪುರ ಶೆಟ್ರು ಮಂಜಣ್ಣ, ಕಿರುವಾಡಿ ಸೋಮಶೇಖರಪ್ಪ, ಪೈಲ್ವಾನ್ ರಾಜಶೇಖರ್, ಕಿರುವಾಡಿ ಸುರೇಂದ್ರ, ವೀರಣ್ಣ, ಕರೇಶಿವಪ್ಳ ಸಿದ್ದೇಶ್, ಪುಟ್ಟರಾಜ್ ಮತ್ತಿತರರು ಭಾಗವಹಿಸಿದ್ದರು.