ಗುಣಮಟ್ಟದ ಆರೋಗ್ಯ ಎಲ್ಲರ ಹಕ್ಕು : ಸಂಸದ ಸಿದ್ದೇಶ್ವರ

ಗುಣಮಟ್ಟದ ಆರೋಗ್ಯ ಎಲ್ಲರ ಹಕ್ಕು : ಸಂಸದ ಸಿದ್ದೇಶ್ವರ

ಜಿಎಂಎಚ್ ಚಾರಿಟಿ ಫೌಂಡೇಶನ್ ವತಿಯಿಂದ  ನ್ಯಾಮತಿಯಲ್ಲಿ ಯಶಸ್ವಿ ಉಚಿತ ವೈದ್ಯಕೀಯ ಶಿಬಿರ

ದಾವಣಗೆರೆ, ನ. 19 – ಜಿ. ಮಲ್ಲಿಕಾರ್ಜುನಪ್ಪ ಮತ್ತು ಶ್ರೀಮತಿ ಹಾಲಮ್ಮ ಚಾರಿಟಿ ಫೌಂಡೇಶನ್ ಭೀಮಸಮುದ್ರ ಮತ್ತು ಸಿಟಿ ಸೆಂಟ್ರಲ್ ಹಾಸ್ಪಿಟಲ್, ನೇತ್ರಾಲಯ, ಲಯನ್ಸ್ ಕ್ಲಬ್ ಆಸರೆ ಇವರುಗಳ ಸಹಯೋಗ ದಲ್ಲಿ ಬೃಹತ್ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ನ್ಯಾಮತಿಯ ಮಹಾಂತೇಶ್ವರ ಕಲ್ಯಾಣ ಮಂಟ ಪದಲ್ಲಿ ಮೊನ್ನೆ ನಡೆಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಸದ ಜಿ.ಎಂ. ಸಿದ್ದೇಶ್ವರ ಅವರು ಮಾತನಾಡಿ, ಬಡವರು ಮತ್ತು ನಿರ್ಗತಿಕರಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಸುಲಭವಾಗಿ ಪಡೆಯಲು ಸಹಾಯ ಮಾಡುವ ಮಾನವ ಪ್ರಯತ್ನದ ಮುಂದುವರಿಕೆಯಲ್ಲಿ ಜಿ. ಮಲ್ಲಿಕಾರ್ಜುನಪ್ಪ ಮತ್ತು ಶ್ರೀಮತಿ ಹಾಲಮ್ಮ ಚಾರಿಟಿ ಫೌಂಡೇಶನ್ ಸದಾ ಮುಂಚೂಣಿಯಲ್ಲಿದೆ ಎಂದು ಹೇಳಿದರು. ಗುಣಮಟ್ಟದ ಆರೋಗ್ಯ ಎಲ್ಲರ ಹಕ್ಕು, ಆರೋಗ್ಯವೇ ಭಾಗ್ಯ, ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ ಎಂದು ಹೇಳಿದರು. 

ಅತಿಥಿಯಾಗಿದ್ದ ಜಿ.ಎಸ್. ಅನಿತ್ ಕುಮಾರ್ ಮಾತನಾಡಿ, ಸುಮಾರು 6 ನುರಿತ ವೈದ್ಯಕೀಯ ತಜ್ಞರುಗಳಿಂದ ವೈದ್ಯಕೀಯ ಪರೀಕ್ಷೆಗಳು ನಡೆಯುತ್ತಿದ್ದು, ಅಗತ್ಯವುಳ್ಳ ರೋಗಿಗಳಿಗೆ ಉಚಿತ ಔಷಧಿಗಳನ್ನು ವಿತರಿಸಲಾಗುವುದು. ಅಗತ್ಯತೆ ಕಂಡು ಬಂದಲ್ಲಿ ಉಚಿತವಾಗಿ ಆಪರೇಷನ್ ಟ್ರಸ್ಟ್ ವತಿಯಿಂದ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ಚಾರಿಟಿ ಫೌಂಡೇಶನ್ ವತಿಯಿಂದ ಸದಸ್ಯ ಪ್ರಭುದೇವ್,  ಸಂಯೋಜಕ ಟಿ.ಆರ್. ತೇಜಸ್ವಿ ಕಟ್ಟಿಮನಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!