ಜಗಳೂರು, ನ.19- ತಾಲ್ಲೂಕಿನ ಸೊಕ್ಕೆ ಗ್ರಾಮದಲ್ಲಿ ಇದೇ ದಿನಾಂಕ 22 ರಂದು ಶ್ರೀ ಶಿರಡಿ ಸಾಯಿಬಾಬಾ ನೂತನ ದೇವಾಲಯದ ಪ್ರಾರಂಭೋತ್ಸವ ಕಳಸಾರೋಹಣ ಹಾಗೂ ನೂತನ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮಹೋತ್ಸವ ವಿಗ್ರಹದ ಪ್ರತಿಷ್ಠಾಪನೆ, ಬೃಹತ್ ಕಾರ್ಯಕ್ರಮ ನಡೆಯಲಿದೆ ಎಂದು ಗ್ರಾ.ಪಂ ಮಾಜಿ ಅಧ್ಯಕ್ಷರಾದ ದಾವಣಗೆರೆ ದಿಶಾ ಸಮಿತಿ ಸದಸ್ಯ ಸ್ವಾತಿ ತಿಪ್ಪೇಸ್ವಾಮಿ ತಿಳಿಸಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.
ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಸುತ್ತೂರು ಮಠ, ಡಾ.ಶಿವಾನುಭವ ಚರವರ್ಯ ಕರಿವೃಷಭದೇಶೀಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ, ಸೋಮೇಕಟ್ಟೆ ಕಾಡಸಿದ್ದೇಶ್ವರ ಮಠ ನೊಣವಿನಕೆರೆ, ಡಾ.ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ದಕ್ಷಿಣ ಕೇದಾರ ವೈರಾಗ್ಯ ಧಾಮ ತಪೋಕ್ಷೇತ್ರ ಕಣ್ವಕುಪ್ಪೆ ಗವಿಮಠ ಇವರು ದಿವ್ಯ ಸಾನ್ನಿಧ್ಯ ವಹಿಸುವರು.
ಸಚಿವರಾದ ಎಸ್.ಚೆಲುವರಾಯಸ್ವಾಮಿ, ಎಸ್.ಎಸ್.ಮಲ್ಲಿಕಾರ್ಜುನ್ ಕಾರ್ಯಕ್ರಮವನ್ನು ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಶಾಸಕ ಬಿ.ದೇವೇಂದ್ರಪ್ಪ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಂಸದ ಜಿ.ಎಂ.ಸಿದ್ದೇಶ್ವರ, ಸಚಿವ ಡಿ.ಸುಧಾಕರ್, ಶಾಸಕರುಗಳಾದ ಕೆ.ಸಿ.ವೀರೇಂದ್ರ, ಪಿ ರವಿಕುಮಾರ್, ಬಸವರಾಜು ಶಿವಗಂಗಾ, ಡಾ.ಶ್ರೀನಿವಾಸ್, ಟಿ ರಘುಮೂರ್ತಿ, ಮಾಜಿ ಶಾಸಕರಾದ ಎಸ್.ವಿ ರಾಮಚಂದ್ರ, ಹೆಚ್.ಪಿ.ರಾಜೇಶ್, ಪಿ.ಹೆಚ್.ಮಂಜುನಾಥ್, ಕೆ.ಶಿವರಾಮ್, ಅಸಗೋಡು ಜಯಸಿಂಹ, ವಿ.ಪ.ಸದಸ್ಯ ಎ.ಎಸ್.ನವೀನ್, ತಿಪ್ಪರಾಜು ಹವಾಲ್ದಾರ್, ನಾಗಭೂಷಣ, ಶಿರಡಿ ಸಾಯಿಬಾಬಾ ಮಂದಿರದ ಮುಖ್ಯಸ್ಥ ಎನ್.ಕೆ.ಬಾಲಗಂಗಾಧರ್, ಕೆ.ಶಿವನಗೌಡ ನಾಯಕ್, ಎನ್.ತಿಪ್ಪೇಸ್ವಾಮಿ, ಡಾ|| ಶಾಂತ ಎ.ತಿಮ್ಮಯ್ಯ, ಶಶಿಧರ್, ಡಾ|| ಸತೀಶ್ಕುಮಾರ್ ಎಸ್. ಹೊಸಮನಿ, ಅನೂಪ್ ಸೀಳಿನ್, ಸೊಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ತಿರುಮಲ ಇತರರು ಭಾಗವಹಿಸಲಿದ್ದಾರೆ.
ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ಧರ್ಮದಲ್ಲಿ ರಾಜಕೀಯ ಬೇಡ, ಪಕ್ಷ ಭೇದ ಮರೆತು ಧರ್ಮವನ್ನು ರಕ್ಷಣೆ ಮಾಡೋಣ, ಧರ್ಮ ನಮ್ಮ ರಕ್ಷಣೆ ಮಾಡುತ್ತದೆ. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೇಡ. ಚುನಾವಣೆ ಬರುತ್ತೆ ಹೋಗುತ್ತೆ. ಭದ್ರಾ ಮೇಲ್ದಂಡೆ ಸೇರಿದಂತೆ ರಾಜ್ಯವಿರಲೀ, ಕೇಂದ್ರವಿರಲೀ ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಅವರೊಂದಿಗೆ ನಿಯೋಗ ಹೋಗಿ ಇತ್ಯರ್ಥ ಮಾಡಲು ಶ್ರಮಿಸುತ್ತೇನೆ ಎಂದು ತಿಳಿಸಿದರು.
ಕ್ಷೇತ್ರದ ಅಭಿವೃದ್ಧಿಗೆ ಸದಾ ನಮ್ಮ ಬೆಂಬಲ: ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ, ಸೊಕ್ಕೆ ಗ್ರಾಮದಲ್ಲಿ ಸ್ವಾತಿ ತಿಪ್ಪೇಸ್ವಾಮಿ ಅವರು ಶಿರಡಿ ಸಾಯಿಬಾಬಾ ದೇವಸ್ಥಾನ ನಿರ್ಮಿಸುವ ಮೂಲಕ ಧರ್ಮ ಜಾಗೃತಿ ಕಾರ್ಯ ಮಾಡುತ್ತಿರುವುದು ಶ್ಲ್ಯಾಘನೀಯ ಎಂದರು.
ನನ್ನ ಕನಸಿನ ಭದ್ರಾ ಮೇಲ್ದಂಡೆ ಯೋಜನೆ, 57 ಕೆರೆಗಳಿಗೆ ನೀರು ಒದಗಿಸುವುದು ಸೇರಿದಂತೆ ಕ್ಷೇತ್ರದ ಅಭಿವೃದ್ಧಿಗೆ ಶಾಸಕ ದೇವೆಂದ್ರಪ್ಪ ಅವರಿಗೆ ಸದಾ ನಮ್ಮ ಬೆಂಬಲಿರುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಸದಸ್ಯ ಹೆಚ್.ನಾಗ ರಾಜ್, ಸೊಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ತಿರುಮಲ, ಬಿಜೆಪಿ ಯುವ ಮುಖಂಡ ಆರಾಧ್ಯ, ಪ.ಪಂ.ಸದಸ್ಯ ಪಾಪಲಿಂಗಪ್ಪ, ಗೋವಿಂದಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.