ರಾಣೇಬೆನ್ನೂರು ತರಳಬಾಳು ಕಾಲೇಜು ಕಾರ್ಯಾಗಾರದಲ್ಲಿ ಡಾ.ಗೋಪಾಲಕೃಷ್ಣ ಹೆಗಡೆ
ರಾಣೇಬೆನ್ನೂರು, ಅ.19- ವೈಜ್ಞಾನಿಕ ಆಸಕ್ತಿಗಳು ಹೊಸ ವರ್ಗದ ನಿಖರ ಸಾಧನಗಳ ಕಡೆಗೆ ಬದಲಾಗುತ್ತಿವೆ ಎಂದು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ನ ಸಂಶೋಧನಾ ಪ್ರಾಧ್ಯಾಪಕ ಡಾ. ಗೋಪಾಲಕೃಷ್ಣ ಹೆಗಡೆ ಹೇಳಿದರು.
ಇಲ್ಲಿನ ಶ್ರೀ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದಲ್ಲಿನ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ವಿಭಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ `ಬಯೋಮೆಡಿಕಲ್ ಅಪ್ಲಿಕೇಶನ್‌ಗಳಿಗಾಗಿ ಮೈಕ್ರೋ ಎಲೆಕ್ಟ್ರೋ ಮೆಕ್ಯಾನಿಕಲ್ ಸಿಸ್ಟಮ್ಸ್ ಮತ್ತು ನ್ಯಾನೋ ಎಲೆಕ್ಟ್ರೋ ಮೆಕ್ಯಾನಿಕಲ್ ಸಿಸ್ಟಮ್ ತಂತ್ರಜ್ಞಾನದಲ್ಲಿನ ಇತ್ತೀಚಿನ ಪ್ರವೃತ್ತಿಗಳು’ ಎಂಬ ವಿಷಯದ ಬಗ್ಗೆ ಅಧ್ಯಾಪಕರ ಅಭಿವೃದ್ಧಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಲೆಕ್ಟ್ರಾನಿಕ್ಸ್ ಮಿನಿಯೇಟರೈಸೇಶನ್ ಕ್ಷೇತ್ರದಲ್ಲಿನ ಗಮನಾರ್ಹ ಪ್ರಗತಿಗಳು ವೈಜ್ಞಾನಿಕ ಆಸಕ್ತಿಯನ್ನು ನಿಖರ ಸಾಧನಗಳ ಕಡೆಗೆ ಬದಲಾಯಿಸಿದ್ದು, ಇದು ಬಯೋ ಮೆಡಿಕಲ್ ಸೆನ್ಸಿಂಗ್, ಮೆಕ್ಯಾನಿಕ್ಸ್, ಮೆಟೀರಿಯಲ್ಸ್, ಸ್ಟ್ರಕ್ಚರ್, ಎಲೆಕ್ಟ್ರಾನಿಕ್ ಸಿಸ್ಟಮ್ಸ್, ಮೈಕ್ರೋ, ನ್ಯಾನೋ ಫ್ಯಾಬ್ರಿಕೇಶನ್ ವಿಭಾಗಗಳನ್ನು ಸಂಯೋಜಿಸುವ ಇಂಟರ್ಡಿಸಿಪ್ಲೆನರಿ ಕೋರ್ಸ್ ಆಗಿದೆ.
ತಂತ್ರಜ್ಞಾನವು ವಿವಿಧ ಸೂಕ್ಷ್ಮ ನ್ಯಾನೋ ಮಾರಾಟ ಸಂವೇದಕಗಳು ಮತ್ತು ಒಂದೇ ಚಿಪ್‌ನಲ್ಲಿ ಆಕ್ಟಿವೇಟರ್‌ಗಳನ್ನು ಸಂಯೋಜಿಸುತ್ತದೆ ಎಂದು ತಿಳಿಸಿದರು.
ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಬಿ. ಶಿವಕುಮಾರ್ ಅಧ್ಯಕ್ಷತೆ ವಹಿಸಿ ದ್ದರು. ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ವಿಭಾಗದ ಮುಖ್ಯಸ್ಥ ಡಾ.ಬಿ. ಮಹೇಶ್ವರಪ್ಪ ವೇದಿಕೆಯಲ್ಲಿ ಉಪಸ್ಥಿತರಿ ದ್ದರು. ಕಾರ್ಯಾಗಾರದ ಸಂಚಾಲಕ ಡಾ. ಶ್ರೀನಿವಾಸರಾವ್ ಉದಾರ ಕಾರ್ಯಾಗಾರದ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಡಾ. ಬಿ. ಮಹೇಶ್ವರಪ್ಪ ಸ್ವಾಗತಿಸಿದರು. ಪ್ರೊ. ಬಿ. ಜಿ. ಚಂದ್ರಶೇಖರ್ ವಂದಿಸಿದರು. ಪ್ರೊ. ಸಿ. ಎಂ. ಶ್ವೇತಾ ಕಾರ್ಯಕ್ರಮ ನಿರೂಪಿಸಿದರು