ಯೋಗ : ಸಂತೋಷ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ

ಯೋಗ : ಸಂತೋಷ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ

ದಾವಣಗೆರೆ, ನ. 17 – ಯೂತ್ಸ್ ಸ್ಪೋರ್ಟ್ಸ್ ಅಂಡ್ ಆಕ್ಟಿವಿಟೀಸ್ ಅಸೋಸಿಯೇಷನ್ ಆಫ್ ಇಂಡಿಯಾ ಆಯೋಜಿಸಲ್ಪಟ್ಟ ವೈಎಸ್‍ಎಎ  ಓಪನ್ ನ್ಯಾಷನಲ್ ಲೆವೆಲ್ ಚಾಂಪಿಯನ್‌ಶಿಪ್ 2023 ಅನ್ನು ಗೋವಾದ ಸೇಂಟ್ ಜೋಸೆಫ್ ಹೈಸ್ಕೂಲ್, ಟಿವಲ್‍ ವದ್ದೇ, ಕ್ಯಾಲಂಗೂಟ್ ಬರ್ಡೆಜ್‍ನಲ್ಲಿ ಕಳೆದ ವಾರ ನಡೆಸಲಾಯಿತು.

ಸ್ಪರ್ಧೆಯಲ್ಲಿ ನಗರದ ಎಸ್.ಎಸ್. ಫಿಟ್‍ನೆಸ್‍ ಅಂಡ್ ಯೋಗ ಸ್ಪೋರ್ಟ್ಸ್‌  ಅಂತರರಾಷ್ಟ್ರೀಯ ಕ್ರೀಡಾಪಟು ಹಾಗೂ ಅಂತರರಾಷ್ಟ್ರೀಯ ತರಬೇತುದಾರ ಡಿ. ಸಂತೋಷ್ 19 ವರ್ಷದ ವಿಭಾಗದಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದು ಬಂಗಾರದ ಪದಕ ಗಳಿಸಿದ್ದಾರೆ. 

ತಂಡದಲ್ಲಿ ಎಸ್. ಸಂಜಯ್ (ಸೋಮೇಶ್ವರ ಶಾಲೆ) (10 ರಿಂದ 12 ವರ್ಷದ ವಿಭಾಗ) ಎಸ್. ಸೂರ್ಯ (ಸೋಮೇಶ್ವರ ಶಾಲೆ), (8 ರಿಂದ 10 ವರ್ಷದ ವಿಭಾಗ) ವಿಷ್ಣುವರ್ಧನ (ಸೋಮೇಶ್ವರ ಶಾಲೆ) (10 ರಿಂದ 12 ವರ್ಷದ ವಿಭಾಗ), ಪಿ. ವಿಶೇಷ್ (ಪೋದಾರ್ ಇಂಟರ್‍ನ್ಯಾಷನಲ್ ಶಾಲೆ, 8 ವರ್ಷದ ವಿಭಾಗ), ಹೆಚ್. ಗಗನ (ಸರ್ಕಾರಿ ಪ್ರಥಮ ದರ್ಜೆ ಕಾಲೇಜ್, ದಾವಣಗೆರೆ) (16 ರಿಂದ 18 ವರ್ಷದ ವಿಭಾಗ) ದಲ್ಲಿ ಅವರುಗಳೂ ಕೂಡ ಪ್ರಥಮ ಸ್ಥಾನ ಪಡೆದು ವಿಜೇತರಾಗಿದ್ದಾರೆ.

ವಿಜೇತರನ್ನು ಸಹಾಯಕ ನಿರ್ದೇಶಕರಾದ ವಿಜಯಲಕ್ಷ್ಮಿ, ಆರ್.ಎಲ್.ಲಾ. ಕಾಲೇಜಿನ ಪ್ರಾಂಶುಪಾಲ ಡಾ. ಜಿ.ಎಸ್. ಯತೀಶ್, ಸೂಪರಿಂಟೆಂಡೆಂಟ್ ಆರ್.ಬಿ. ಲಿಂಗರಾಜ್ ಅಭಿನಂದಿಸಿದ್ದಾರೆ.

error: Content is protected !!