ಮಲೇಬೆನ್ನೂರು, ನ. 12 – ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಗುರುವಾರ ಬೆಂಗಳೂರಿನ ಆರೋಗ್ಯ ಇಲಾಖೆ ಕೇಂದ್ರೀಯ ವಿಭಾಗೀಯ ಕಛೇರಿಯ ಸಂಶೋಧನಾಧಿಕಾರಿ ಸೆಂಥಿಲ್ ಕುಮಾರ್ ಅವರು ಭೇಟಿ ನೀಡಿ ಪ್ರಯೋಗ ಶಾಲೆಯನ್ನು ಪರಿಶೀಲಿಸಿದರು.
ಪ್ರಭಾರ ಡಿಹೆಚ್‌ಓ ಡಾ. ಪ್ರಶಾಂತ್, ವೈದ್ಯಾಧಿಕಾರಿ ಡಾ. ಲಕ್ಷ್ಮಿದೇವಿ, ತಾ.ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ. ಉಮ್ಮಣ್ಣ, ಪ್ರಯೋಗ ಶಾಲೆಯ ತಂತ್ರಜ್ಞ ಅಧಿಕಾರಿಗಳಾದ ಆಂಜನೇಯ, ರಾಜಪ್ಪ ಈ ವೇಳೆ ಹಾಜರಿದ್ದರು.