ಯೋಗಾಸನ ಸ್ಪರ್ಧೆಯಲ್ಲಿ 28 ವಿದ್ಯಾರ್ಥಿಗಳು ರಾಷ್ಟ ಮಟ್ಟಕ್ಕೆ ಆಯ್ಕೆ

ಯೋಗಾಸನ ಸ್ಪರ್ಧೆಯಲ್ಲಿ 28 ವಿದ್ಯಾರ್ಥಿಗಳು ರಾಷ್ಟ ಮಟ್ಟಕ್ಕೆ ಆಯ್ಕೆ

ಸಿರಿಗೆರೆ, ಅ.26- ಸಿರಿಗೆರೆಯ ಶ್ರೀ ಗುರುಶಾಂತೇಶ್ವರ ದಾಸೋಹ ಭವನದಲ್ಲಿ ಮೊನ್ನೆ ನಡೆದ ರಾಜ್ಯಮಟ್ಟದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ – ಬಾಲಕಿಯರ ಯೋಗಾಸನ ಸ್ಪರ್ಧೆಯಲ್ಲಿ 28 ವಿದ್ಯಾರ್ಥಿಗಳು ವಿಜೇತರಾಗಿ ರಾಷ್ಟಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 

ಈ ಎಲ್ಲಾ ವಿದ್ಯಾರ್ಥಿಗಳಿಗೆ ತರಳಬಾಳು ಜಗದ್ಗುರು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಬಹುಮಾನ ವಿತರಿಸಿದರು. 

17 ವರ್ಷ ವಯೋಮಿತಿಯ ಪುರುಷರ ವಿಭಾಗದ ಯೋಗಾಸನ ಸ್ಪರ್ಧೆಯಲ್ಲಿ ಮೈಸೂರಿನ ವಿ.ಎಸ್.ಕವೀಶ್, ಗದಗಿನ ನರಗುಂದ ಆಕಾಶ್ ಪಿ.ಜಾನ್ಗಿನ್, ದೊಡ್ಡಬಳ್ಳಾಪುರದ ಎಸ್.ಜೇಷ್ಠ, ಬೆಳ್ತಂಗಡಿಯ ಮೋಹಿತ್, ಹುಬ್ಬಳ್ಳಿ ಸಿರಗುಪ್ಪಿಯ ಶಿವಾನಂದ ಕುಂದಗೋಳ್ ಮತ್ತು ಕಲಾತ್ಮಕ ಯೋಗದಲ್ಲಿ ಬೆಂಗಳೂರು ಆನೇಕಲ್‍ನ ಎನ್.ಮಯೂರ್ ಹಾಗೂ ತಾಳಬದ್ದ ಯೋಗದಲ್ಲಿ ಸಿಂಧನೂರು ತಾಲ್ಲೂಕಿನ ಗುಜಲ್ಲಿಯ ಕುಮಾರ್ ವಿಜೇತರಾಗಿದ್ದಾರೆ. 

ಬಾಲಕಿಯರ ವಿಭಾಗದಲ್ಲಿ ಮೂಡಬಿದ್ರೆ ಪುತ್ತಿಗೆಯ ಜಯಲಕ್ಷ್ಮಿ ಗಿರಿಜಾ ಶಂಕರಗೌಡ ಕರೇಗೌಡರ, ಬೈಂದೂರು ತಾಲ್ಲೂಕಿನ ನವುಂದದ ನಿರೀಕ್ಷಾ, ತೀರ್ಥಹಳ್ಳಿ ತಾಲ್ಲೂಕಿನ ಡಿ.ರಜತಾ, ಸಾಗರದ ವಿ.ತನ್ವಿತ, ಸಿರಗುಪ್ಪಿಯ ರಾಧ ಅಳವಂಡಿ ಮತ್ತು ಕಲಾತ್ಮಕ ಯೋಗದಲ್ಲಿ ಗೋಕಾಕ್‍ನ ಬಲೋಬಲ್‌ನ ಪ್ರಿಯಾಂಕ ಕೊಡ್ಲಿಕರ್ ಹಾಗೂ ತಾಳಬದ್ದ ಯೋಗದಲ್ಲಿ ಉಡುಪಿಯ ತನುಶ್ರೀ ವಿಜೇತರಾಗಿದ್ದಾರೆ.

14 ವರ್ಷ ವಯೋಮಿತಿಯ ಪುರುಷರ ವಿಭಾಗದ ಯೋಗಾಸನ ಸ್ಪರ್ಧೆಯಲ್ಲಿ ಕಾರ್ಕಳದ ಉದ್ಭವ್ ಜಿ. ದೇವದೀನ, ಬೆಂಗಳೂರಿನ ಕೆಂಚನಹಳ್ಳಿಯ ಝಡ್.ಯಶವಂತ್, ಸಿರಗುಪ್ಪಿಯ ವರುಣ್ ಹೆಚ್.ಕುರಹಟ್ಟಿ, ಪುತ್ತೂರು ಕನಿಯೂರ್‌ನ ಟಿ.ಮೌನೀಶ್‌, ಕುಮಟಾದ ಸಚಿನ್ ಶಿವನಂದಗೌಡ ಮತ್ತು ಕಲಾತ್ಮಕ ಯೋಗದಲ್ಲಿ ಮೂಡಬಿದ್ರೆಯ ಆಳ್ವಾಸ್ ಶಾಲೆಯ ಆದರ್ಶ್ ಕಲ್ಲಪ್ಪ ಸವಲೆ ಹಾಗೂ ತಾಳಬದ್ದ ಯೋಗದಲ್ಲಿ ಸಾಗರ ವನಸಿರಿ ಶಾಲೆಯ ಎಂ.ಬಿ.ಶುಶ್ರುತ್ ವಿಜೇತರಾಗಿದ್ದಾರೆ.

ಬಾಲಕಿಯರ ವಿಭಾಗದಲ್ಲಿ ಶಿರಗುಪ್ಪಿಯ ಹೇಮಾ ಬಲಿಗೇರಾ, ರತ್ನ ಮಂಜುನಾಥ ಸೆಗೌಟಿ, ಕುಂದಾಪುರದ ಲಾಸ್ಯ ಮಧ್ಯಸ್ಥ, ಹರಿಹರದ ಕೆ.ವಿ.ಶ್ರುತಿ, ಪುತ್ತೂರು ಕನಿಯೂರ್‌ನ ಕೆ.ಹೆಚ್.ಶ್ರೀಮಾ ಮತ್ತು ಕಲಾತ್ಮಕ ಯೋಗದಲ್ಲಿ ಹರಿಹರದ ನಮಿತಾ ಎನ್.ಪ್ರಭು ಹಾಗೂ ತಾಳಬದ್ದ ಯೋಗದಲ್ಲಿ ಕಾರ್ಕಳ ಕುಕ್ಕುದ್ದೂರ್ನ ಅನ್ವಿ ಹೆಚ್. ಅಂಚನ್ ವಿಜೇತರಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 

ಸಂಸ್ಥೆಯ ಆಡಳಿತಾಧಿಕಾರಿ   ಡಾ.ಹೆಚ್.ವಿ.ವಾಮದೇವಪ್ಪ, ಜಿಲ್ಲಾ ದೈಹಿಕ ಶಿಕ್ಷಣಾಕಾರಿ ಎ.ಪರಶುರಾಮಪ್ಪ ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!