ಯುವಕರಿಗೆ ಶಕ್ತಿ ತುಂಬಿದ್ದು ಮುರುಘಾ ಪರಂಪರೆ

ಯುವಕರಿಗೆ ಶಕ್ತಿ ತುಂಬಿದ್ದು ಮುರುಘಾ ಪರಂಪರೆ

ಚಿತ್ರದುರ್ಗ: ಶರಣ ಸಂಸ್ಕತಿ ಉತ್ಸವದಲ್ಲಿ ಶ್ರೀ ಶಿವಬಸವ ಸ್ವಾಮೀಜಿ ಅಭಿಮತ

ಚಿತ್ರದುರ್ಗ, ಅ.22- ನಾಡಿನ ಶಕ್ತಿಯೆಂದರೆ ಯುವ ಶಕ್ತಿ. ದೇಶ ಸರ್ವಾಂಗೀಣ ಅಭಿವೃದ್ದಿಯಾಗಬೇಕಾದರೆ ಯುವಕರಿಗೆ ಶಕ್ತಿ ತುಂಬಬೇಕು. ಯುವಕರಿಗೆ ಅಂತಹ ಶಕ್ತಿ ತುಂಬಿದ್ದು ಮುರುಘಾ ಪರಂಪರೆ ಎಂದು ಶರಣ ಸಂಸ್ಕೃತಿ ಉತ್ಸವದ ಗೌರವಾಧ್ಯಕ್ಷರಾದ ಅಥಣಿ ಗಚ್ಚಿನಮಠದ ಶ್ರೀ ಶಿವಬಸವ ಮಹಾಸ್ವಾಮೀಜಿ ಹೇಳಿದರು.

ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಭಾನು ವಾರ ಸಂಜೆ ನಡೆದ ಯುವ ಸಮಾವೇಶ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕತೃ ಮುರುಗಿ ಶಾಂತವೀರ ಶ್ರೀಗಳು ಭರಮಣ್ಣನಾಯಕರನ್ನು ನಾಡಿನ ದೊರೆಯಾಗಿ ಮಾಡುತ್ತಾರೆ.  ಇಂದು ಸಂಕ್ರಮಣ ಕಾಲದಲ್ಲಿ ವೇದಿಕೆಯಲ್ಲಿ ಮುರುಗಿ ಶಾಂತವೀರ ಶ್ರೀಗಳ ಪುತ್ಥಳಿ ಅನಾವರಣವಾಗಿದೆ. ಸದುದ್ದೇಶ, ನಿಸ್ವಾರ್ಥ ಸೇವೆಯಿರಬೇಕು.  ಕಾಯ ವಾಚಾ ಮನಸಾ ಕಾರ್ಯವನ್ನು ನಿಭಾಯಿಸಿದರೆ ಮುರುಘೇಶ ಆಶೀರ್ವದಿಸುತ್ತಾರೆ ಎಂದು ನುಡಿದರು.

ಕಾರ್ಯಕ್ರಮದ ಸಮ್ಮುಖ ವಹಿಸಿ ಮಾತನಾಡಿದ ವಿಜಯಪುರ-ಚಿತ್ರದುರ್ಗ ಶ್ರೀ ವನಶ್ರೀ ಮಠದ ಡಾ.ಬಸವಕುಮಾರ ಮಹಾಸ್ವಾಮೀಜಿ, ಒಂದು ಸಂಸ್ಕೃತಿಗೆ ಒಳಿತುಗಳನ್ನು ಎತ್ತಿ ಹಿಡಿದ ಮುರುಘಾ ಪರಂಪರೆ ದಾಸೋಹಕ್ಕೆ ಪ್ರಸಿದ್ದವಾದುದು ಎಂದು ಹೇಳಿದರು.

ರವೀಂದ್ರ ಕಲಾ ಕೇಂದ್ರ, ಕರ್ನಾಟಕ ಏಕೀಕರ ಣಕ್ಕೆ ಮಹತ್ವ ಕೊಟ್ಟವರು ಜಯದೇವ ಜಗದ್ಗುರು ಗಳು. ಅವರು ದಾಸೋಹಕ್ಕೆ ಹೆಚ್ಚು ಮಹತ್ವ ಕೊಟ್ಟ ವರು.  ಅವರದು ದೂರ ದೃಷ್ಟಿಯ ಆಲೋಚನೆ. ಸರ್ಪಭೂಷಣ ಮಠವನ್ನು ಕಟ್ಟಿ ಟ್ರಸ್ಟ್ ನಿರ್ಮಾಣ ಮಾಡಿದವರು ಜಯದೇವ ಜಗದ್ಗುರುಗಳು. 53 ವರ್ಷಗಳ ಕಾಲ ಈ ಸಂಸ್ಥಾನದ ಮುಂದುವರಿಕೆಗಾಗಿ ಶ್ರಮಿಸಿದವರು. ಜಿ.ಎಸ್.ಶಿವರುದ್ರಪ್ಪ, ಚನ್ನವೀರ ಕಣವಿ, ಚಿದಾನಂದಮೂರ್ತಿ, ಪಾಟೀಲ್ ಪುಟ್ಟಪ್ಪ. ಬಿ.ಡಿ.ಜತ್ತಿ ಮೊದಲಾದವರು ಜಯದೇವ ವಿದ್ಯಾರ್ಥಿ ನಿಲಯಗಳಲ್ಲಿ ಓದಿ ದೊಡ್ಡವರಾದವರು.  ಇಂತಹ ದೊಡ್ಡ ಪರಂಪರೆಯನ್ನು ಹೊಂದಿದೆ ಈ ಮುರುಘಾ ಪರಂಪರೆ.  ವಿರಕ್ತಕ್ಕೆ ಅರ್ಥ ತುಂಬಿದವರು ಜಯದೇವ ಜಗದ್ಗುರುಗಳು. ನಮಗೆ ಮುರುಘೇಶನೇ ಅಂತಿಮ ಸತ್ಯ ಎಂದು ಹೇಳಿದರು.   

ಎಸ್.ಜೆ.ಎಂ.ವಿದ್ಯಾಪೀಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಭರತ್‍ಕುಮಾರ್ ಮಾತನಾಡಿ,  ಜೀವನದಲ್ಲಿ ಗುರಿ ಇರಬೇಕು, ಸಾಧಿಸುವ ಹಂಬಲವಿರಬೇಕು ಎಂದರು.

ಚಿತ್ರದುರ್ಗ ಜಿಲ್ಲಾ ರಕ್ಷಣಾಧಿಕಾರಿ ಧರ್ಮೇಂದರ್‍ಕುಮಾರ್ ಮೀನಾ ಮಾತನಾಡಿ, ಯುವಕರಲ್ಲಿ ಶಿಸ್ತು ಬಹಳ ಮುಖ್ಯ. ಸಿಗುವ ಸವಲತ್ತುಗಳನ್ನು ಸದುದ್ದೇಶದಿಂದ ಬಳಸಿಕೊಂಡರೆ ಒಳ್ಳೆಯದಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಮಹಾಸ್ವಾಮೀಜಿ, ಉಸ್ತುವಾರಿ ಶ್ರೀಗಳಾದ ಶ್ರೀ ಬಸವಪ್ರಭು ಸ್ವಾಮೀಜಿ, ಪ್ರಧಾನ ಸತ್ರ ಮತ್ತು ಜಿಲ್ಲಾ ನ್ಯಾಯಾಧೀಶರು ಹಾಗು ಶ್ರೀ ಮುರುಘಾ ಮಠದ ಆಡಳಿತಾಧಿಕಾರಿಗಳಾದ ಶ್ರೀಮತಿ.ಬಿ.ಎಸ್.ರೇಖಾ, ಶರಣಸಂಸ್ಕೃತಿ ಉತ್ಸವ ಕಾರ್ಯಾಧ್ಯಕ್ಷರಾದ ಕೆ.ಸಿ.ನಾಗರಾಜ್, ಡಾ.ಅಕ್ಕೈ ಪದ್ಮಶಾಲಿ, ಮಂಜುನಾಥ್ ಜಿ.ಕೆ, ಶ್ರೀಮತಿ ಶಬರಿ ಗಾಣಿಗ ಉಪಸ್ಥಿತರಿದ್ದರು. 

ಜಮುರಾ ಕಲಾವಿದರು ಪ್ರಾರ್ಥಿಸಿ, ಶ್ರೀನಿವಾಸ್, ಪ್ರದೀಪ್ ಕುಮಾರ್.ಡಿ.ವಿ ನಿರೂಪಿಸಿ ವಂದಿಸಿದರು.

error: Content is protected !!