ಕೊಟ್ಟೂರು, ಅ. 18- ಸಮುದಾಯ ಆರೋಗ್ಯ ಕೇಂದ್ರ ಉಜ್ಜಿನಿಯಲ್ಲಿ ಆಯುಷ್ಮಾನ್ ಭವ ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು. ಗ್ರಾ.ಪಂ. ಅಧ್ಯಕ್ಷರಾದ ನಿಂಗಮ್ಮ ಮಾರಪ್ಪ ಕಾರ್ಯಕ್ರಮ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ತಾಲ್ಲೂಕು ವೈದ್ಯಾಧಿಕಾರಿ ಡಾ. ಪ್ರದೀಪ್ ಅವರು ಆಯುಷ್ಮಾನ್ ಭವ ಆರೋಗ್ಯ ಶಿಬಿರದಲ್ಲಿ ಸಿಗುವಂತಹ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಪುಷ್ಪಲತಾ ರೇವಣಸಿದ್ದಪ್ಪ, ಮಂಜುನಾಥ, ನಾಗೇಂದ್ರಪ್ಪ ಆಯುಷ್ಮಾನ್ ಆರೋಗ್ಯ ಮೇಳದಲ್ಲಿ ನುರಿತ ವೈದ್ಯಾಧಿಕಾರಿಗಳಾದ ಡಾ. ನಿರಂಜನ್, ಡಾ. ರವಿಕುಮಾರ್, ಡಾ. ಮನ್ಸೂರ್ ಅಹ್ಮದ್, ಡಾ. ರಾಜಶೇಖರ್, ಡಾ. ಲಕ್ಷ್ಮಿ, ಡಾ. ರೇಣುಕಾ, ಡಾ. ಆಕಾಶ್, ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಜೆ.ಎಂ. ಮರುಳಾರಾಧ್ಯ ಕಾರ್ಯಕ್ರಮ ನಿರೂಪಿಸಿದರು.