ರಾಣೇಬೆನ್ನೂರಿನ ಶನೈಶ್ಚರ ಮಂದಿರದ ಶ್ರೀ ಶಿವಯೋಗಿ ಮಹಾಸ್ವಾಮೀಜಿ
ರಾಣಿಬೆನ್ನೂರು, ಅ.18- ಸ್ಥಳೀಯ ಹಿರೇಮಠ ಶ್ರೀ ಶನೈಶ್ಚರ ಮಂದಿರದಲ್ಲಿ ಮಹಾಲಯ ಅಮಾವಾಸ್ಯೆ ಪ್ರಯುಕ್ತ ಲೋಕ ಕಲ್ಯಾಣಾರ್ಥವಾಗಿ ಹೋಮ, ಪೂರ್ಣಾಹುತಿ, ತೈಲಾಭಿಷೇಕ, ಮಹಾಮಂಗಳಾರತಿ ಸೇರಿದಂತೆ ವಿಶೇಷ ಪೂಜೆಗಳು ಮುಂಜಾನೆಯಿಂದ ರಾತ್ರಿಯವರೆಗೂ ನಿರಂತರವಾಗಿ ನೆರವೇರಿದವು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಶನೈಶ್ಚರ ಮಂದಿರದ ಶ್ರೀ ಶಿವಯೋಗಿ ಮಹಾ ಸ್ವಾಮಿಗಳು ಮಾತನಾಡಿ ಹೋಮ, ಯಾಗ ಮಾಡುವುದರಿಂದ ಪರಿಸರ ಶುದ್ಧಿಯಾಗು ವುದು.ಮನುಜನಲ್ಲಿನ ರೋಗ-ರುಜಿನಗಳು ದೂರವಾಗುವವು, ಪರಿಸರದಲ್ಲಿನ ಕ್ರಿಮಿ-ಕೀಟಗಳು ನಾಶವಾಗುವವು. ಇದರಿಂದ ಮನು ಷ್ಯನ ಹಾಗೂ ಆತನ ಕುಟುಂಬ ವರ್ಗದಲ್ಲಿ ಉತ್ತಮ ಆರೋಗ್ಯ ಕಂಡುಬರುವುದು ಎಂದರು.
ಮುಂಬರುವ ನವರಾತ್ರಿ ಸೇರಿದಂತೆ ದುರ್ಗೆ, ಚಕ್ರಪಾಣಿ ಮಹಾಮಾತೆಯ ಪೂಜೆ ಮಾಡುವುದರಿಂದ ಆಪತ್ತಿನಲ್ಲಿರುವವರನ್ನು ರಕ್ಷಿಸುತ್ತಾಳೆ. ಜಗತ್ತಿನ ಯೋಗ ಕ್ಷೇಮಗಳಿಗೆ ಕಾರಣಳಾಗುತ್ತಾಳೆ. ಭಕ್ತಿ, ಶ್ರದ್ದೆಗಳಿಂದ ಕುಂಕುಮಾರ್ಚನೆ ಮಾಡಿದರೆ ಆಯುಷ್ಯ ಹೆಚ್ಚಳವಾಗುತ್ತದೆ. ಪಂಚಾಕ್ಷರಿ ಜಪ ಮಾಡುವುದರಿಂದ ದುಃಖ, ನೋವುಗಳನ್ನು ದೂರ ಮಾಡಲು ಶಕ್ತಿ ಬರುತ್ತದೆ. ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತರು ಪಾಲ್ಗೊಳ್ಳುವುದರಿಂದ ಜೀವನ ಪಾವನವಾಗುತ್ತದೆ ಎಂದರು.
ಪುನೀತ, ಗುದ್ಲೇಶ್ವರ, ಪರಮೇಶ್ವರ ಸೇರಿದಂತೆ ಸ್ಥಳೀಯ ಶಾಸ್ತ್ರಿಗಳು, ಭಕ್ತರು ಹೋಮ, ಯಾಗ ಪೂಜೆಯಲ್ಲಿ ಭಾಗವಹಿಸಿದ್ದರು.