ಮಲೇಬೆನ್ನೂರು, ಅ.18- ಗೋವಿನಹಾಳ್ ಗ್ರಾಮದ ಶ್ರೀ ಗಂಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಡಾ. ವೀರೇಂದ್ರ ಹೆಗ್ಗಡೆ ಅವರು ಬಿಡುಗಡೆ ಮಾಡಿರುವ 1 ಲಕ್ಷ ರೂ.ಗಳ ಡಿಡಿಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಲೇಬೆನ್ನೂರು ಯೋಜನಾಧಿಕಾರಿ ವಸಂತ್ ದೇವಾಡಿಗ ಅವರು ಮಂಗಳವಾರ ದೇವಸ್ಥಾನ ಸಮಿತಿಯವರಿಗೆ ನೀಡಿದರು.
ಜಿ.ಪಂ. ಮಾಜಿ ಸದಸ್ಯ ಬಸವರಾಜಪ್ಪ ದೇವಸ್ಥಾನ ಸಮಿತಿ ಅಧ್ಯಕ್ಷ ಚಂದ್ರಪ್ಪ, ಉಪಾಧ್ಯಕ್ಷ ಹನುಮಂತಪ್ಪ, ಕೊಕ್ಕನೂರು ಒಕ್ಕೂಟದ ಅಧ್ಯಕ್ಷ ಹನುಮಂತರಾಯ, ಮಹಿಳಾ ಒಕ್ಕೂಟದ ಅಧ್ಯಕ್ಷೆ ಪವಿತ್ರ, ಜನಜಾಗೃತಿ ವೇದಿಕೆಯ ಯೋಜನಾಧಿಕಾರಿ ನಾಗರಾಜ್ ಕುಲಾಲ್, ಕೊಕ್ಕನೂರು ವಲಯ ಮೇಲ್ವೆಚಾರಕರಾದ ರಂಜಿತಾ, ಎಂ.ಎನ್.ಹಳ್ಳಿ ವಲಯ ಮೇಲ್ವಿಚಾರಕರಾದ ರಕ್ಷಿತಾ ಮತ್ತು ಗ್ರಾಮದ ಸೇವಾ ಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಈ ವೇಳೆ ಹಾಜರಿದ್ದರು.