ಶ್ರೀ ಜಗದ್ಗುರು ಜಯವಿಭವ ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ ಸಭೆ

ಶ್ರೀ ಜಗದ್ಗುರು ಜಯವಿಭವ ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ ಸಭೆ

ದಾವಣಗೆರೆ, ಅ.12- ನಗರದ ಶ್ರೀ ಜಗದ್ಗುರು ಜಯವಿಭವ ವಿದ್ಯಾಸಂಸ್ಥೆಯ ನರಸರಾಜ ರಸ್ತೆಯ ಅಕ್ಕಮಹಾದೇವಿ ಬಾಲಕಿಯರ ಪ್ರೌಢಶಾಲೆಯಲ್ಲಿ  ಮತ್ತು  ವಿನೋಬನಗರದ ವಿದ್ಯಾಸಂಸ್ಥೆಯ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಪ್ರೌಢಶಾಲೆಯಲ್ಲಿ  ಕಳೆದ ವಾರ ಹಿರಿಯ ವಿದ್ಯಾರ್ಥಿಗಳ ಕರೆಯಲಾಗಿತ್ತು.

ವಿದ್ಯಾಸಂಸ್ಥೆಯ ‘60ರ ಸಂಭ್ರಮ’ ಕಾರ್ಯಕ್ರಮದ ಪೂರ್ವಭಾವಿ ಸಭೆಗೆ ನಮ್ಮ ಸಂಸ್ಥೆಯ ಶಾಲೆಗಳ ಹಿರಿಯ ವಿದ್ಯಾರ್ಥಿಗಳು ಹಾಗು ಕಾರ್ಯದರ್ಶಿ ಸಸಿಗಳಿಗೆ ನೀರುಣಿಸುವ ಮೂಲಕ ಸಭೆಯನ್ನು ಉದ್ಘಾಟಿಸಿದರು.

ನರಸರಾಜ ರಸ್ತೆಯ ಅಕ್ಕಮಹಾದೇವಿ ಬಾಲಕಿಯರ ಶಾಲೆ ಹಾಗೂ ವಿನೋಬನಗರದ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಶಾಲೆಗಳು ಪ್ರಾರಂಭ ವಾಗಿ 60 ವರ್ಷ ಪೂರೈಸಿದ್ದು, 60 ವರ್ಷ ತಲುಪಿದೆ ಎಂದರೆ ಅದಕ್ಕೆ ಅಂದು ಸಂಸ್ಥಾಪಕ ಅಧ್ಯಕ್ಷರಾಗಿದ್ದ ವೀರಭದ್ರಪ್ಪ ಎಂ. ಚಿಗಟೇರಿ ಹಾಗೂ ಎಂ. ಕೆ. ಶಿವಪ್ಪ ಹಾಗು ಎಲ್ಲ ಸದಸ್ಯರು ಕಾರಣ. ಅಂದು ಹಚ್ಚಿದ ಅಕ್ಷರದ ಗಿಡ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ ಎಂದರೆ ಅದಕ್ಕೆ ಕಾರಣ ಶ್ರಮಿಸಿದ ಎಲ್ಲ ಶಿಕ್ಷಕ ಸಿಬ್ಬಂದಿಯವರು ಹಾಗೂ ಅಪ್ಪ, ಮಗ, ಮೊಮ್ಮಗ ಹೀಗೆ ಮೂರು ತಲೆಮಾರಿನವರು ಒಂದೇ ಶಾಲೆಯಲ್ಲಿ ಓದಿದ್ದು ಎಂದರೆ ಅದು ನಮ್ಮ ಶಾಲೆಗಳ ಮೇಲಿರುವ ಪ್ರೀತಿ, ಗೌರವ ಮತ್ತು ನಂಬಿಕೆ ಎನ್ನಬಹುದು

ಈಗ ನಾವು ನವೆಂಬರ್‌ ತಿಂಗಳ ಕೊನೆಯ ವಾರದಲ್ಲಿ 60ರ ಸಂಭ್ರಮದ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಎಲ್ಲರ ಸಲಹೆಗಳನ್ನು ಸ್ವಾಗತಿಸುತ್ತೇವೆ. ಹಲವಾರು ಬ್ಯಾಚ್ ವಿದ್ಯಾರ್ಥಿಗಳು ಮಾತನಾಡಿ, ನಮ್ಮ ಶಾಲೆ ನಮ್ಮ ಹೆಮ್ಮೆ, ಕಾರ್ಯಕ್ರಮಕ್ಕೆ ಸಹಾಯ, ಸಹಕಾರ ನೀಡುತ್ತೇವೆಂದರು.

ಶಾಲೆಗಳ ಪ್ರಾಚಾರ್ಯರುಗಳಾದ ಎಸ್.ನಾಗರಾಜ, ಸುರೇಶ ನಾಯ್ಕ, ಹೆಚ್‌. ನಿಂಗಪ್ಪ, ವೀರಮ್ಮ, ಶೈಲಜಾ, ಶೈಕ್ಷಣಿಕ ಸಲಹೆಗಾರರಾದ ಆರ್.ವಾಗ್ದೇವಿ, ಎಂ.ಟಿ.ಮಳಗಿ ಹಾಗು ಹಿರಿಯ ವಿದ್ಯಾರ್ಥಿಗಳು ಇದ್ದರು.

error: Content is protected !!