ದಾವಣಗೆರೆ, ಅ. 6- ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಕ್ರೀಡಾಕೂಟ ವನ್ನು ದಾವಣಗೆರೆ ಸಪ್ತಗಿರಿ ಕಾಲೇಜಿನವರು ಆಯೋಜಿಸಿದ್ದು ಗುಂಪು ಆಟಗಳಲ್ಲಿ ಟೆನ್ನಿಸ್, ವಾಲಿಬಾಲ್ ಪಂದ್ಯಗಳನ್ನು ನಡೆಸಲು ಎಸ್ ಕೆ ಎ ಎಚ್ ಮಿಲ್ಲತ್ ಪದವಿ ಪೂರ್ವ ಕಾಲೇ ಜಿಗೆ ಜವಾಬ್ದಾರಿ ನೀಡಿದ್ದು ಕ್ರೀಡಾಕೂಟದಲ್ಲಿ ಎಸ್.ಕೆ.ಎ.ಹೆಚ್. ಮಿಲ್ಲತ್ ಕಾಲೇಜಿನ ವಿದ್ಯಾರ್ಥಿಗಳು ಬಾಲಕಿಯರ ವಾಲಿಬಾಲ್ ಪಂದ್ಯದಲ್ಲಿ ಪ್ರಥಮ, ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಬಾಲಕರ ವಿಭಾಗದಲ್ಲಿ ಪ್ರಥಮ ಬಹುಮಾನ ಸಿದ್ದಗಂಗಾ ಪದವಿ ಪೂರ್ವ ಕಾಲೇಜ್, ದ್ವಿತೀಯ ಬಹುಮಾನ ಎಸ್ ಕೆ ಎಚ್ ಮಿಲ್ಲತ್ ಕಾಲೇಜ್ ವಿದ್ಯಾರ್ಥಿಗಳು ಪಡೆದಿರುತ್ತಾರೆ. ಸದರಿ ಟೆನ್ನಿಸ್, ವಾಲಿಬಾಲ್ ಪಂದ್ಯದಲ್ಲಿ ಆಯ್ಕೆ ಪ್ರಕ್ರಿಯೆ ಎಂದು ಆಯ್ಕೆಯಾಗುವ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ರಾಜ್ಯಮಟ್ಟದ ಪಂದ್ಯಗಳಲ್ಲಿ ಭಾಗವಹಿಸಲಿದ್ದಾರೆ.
ಜಿಲ್ಲಾ ಕ್ರೀಡಾಕೂಟ : ಮಿಲ್ಲತ್ ಕಾಲೇಜು ಪ್ರಥಮ
