ಹೊನ್ನಾಳಿ, ಅ.4- ತಾಲ್ಲೂಕಿನ ಬೆನಕನಹಳ್ಳಿ ಗ್ರಾಮದ ತರಳಬಾಳು ಶ್ರೀ ವಿನಾಯಕ ಪ್ರೌಢಶಾಲೆ ಯಲ್ಲಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರ ಜಯಂತಿ ಆಚರಿಸಲಾಯಿತು. ಮಕ್ಕಳಿಗೆ ಎ.ಜಿ.ಹನುಮಂತಪ್ಪ ನವರ ಮಗ ಡಾ.ರೇವಣಸಿದ್ದಪ್ಪ ನೀಡಿದ ಕ್ರೀಡಾ ಸಮವಸ್ತ್ರ ಗಳನ್ನು ಉಚಿತವಾಗಿ ನೀಡಲಾಯಿತು. ಡಾ.ರೇವಣಸಿದ್ದಪ್ಪ ಅಧ್ಯಕ್ಷತೆ ವಹಿಸಿದ್ದರು. ಶಾಲಾಭಿವೃದ್ದಿ ಅಧ್ಯಕ್ಷ ಎ.ಜಿ.ಹನುಮಂ ತಪ್ಪ, ಸಮಿತಿ ಸದಸ್ಯ ಹೆಚ್.ಜಿ.ರುದ್ರೇಶಪ್ಪ, ಉಪಾಧ್ಯಕ್ಷ ವೀರ ಶೇಖರಪ್ಪ, ಸದಸ್ಯರಾದ ಎಂ.ನಾಗಪ್ಪ, ಕಮ್ಮಾರಗಟ್ಟೆ ಶಿವ ಕುಮಾರ, ಪಿ.ವೀರಣ್ಣ ಮಾತನಾಡಿದರು. ಈ ಸಂದರ್ಭದಲ್ಲಿ ಹೆಚ್.ಜಿ.ಸಂತೋಷ್, ವೀರಕೇಶ್, ಶಾಲಾ ಮುಖ್ಯೋ ಪಾಧ್ಯಾಯ ವಸಂತ ಬಡಿಗೇರ, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.
January 7, 2025