ದಾವಣಗೆರೆ, ಅ.3- ಇಲ್ಲಿನ ವಿದ್ಯಾನಗರದ ವಿನೂತನ ಮಹಿಳಾ ಸಮಾಜದಲ್ಲಿ ಸಮಾಜದ ಅಧ್ಯಕ್ಷರಾದ ಶ್ರೀಮತಿ ಚಂದ್ರಿಕಾ ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ಗಾಂಧೀಜಿ – ಶಾಸ್ತ್ರೀಜಿ ಹಾಗೂ ಹಿರಿಯರ ದಿನಾಚರಣೆ ಆಚರಿಸಲಾಯಿತು.
100ಕ್ಕೂ ಹೆಚ್ಚು ಜನ ಹಿರಿಯರು ಕಾರ್ಯಕ್ರಮಕ್ಕೆ ಆಗಮಿಸಿ, ವಯಸ್ಸು ಮರೆತು ಉತ್ಸುಕತೆಯಿಂದ ಆಟಗಳಲ್ಲಿ ಭಾಗವಹಿಸಿ ಬಹುಮಾನ ಪಡೆದು ತಮ್ಮ ಅನುಭವ ಹಂಚಿಕೊಂಡರು.
ಮುಖ್ಯ ಅತಿಥಿಗಳಾಗಿ ಹಿರಿಯ ವೈದ್ಯರಾದ ಡಾ. ಶಾಂತಾಭಟ್ ಆಗಮಿಸಿ, ವಯೋವೃದ್ಧರು ತಮ್ಮ ಮಿತ ಆಹಾರ ಹಾಗೂ ಉತ್ತಮ ರೀತಿಯ ವ್ಯಾಯಾಮದಿಂದ ತಮ್ಮ ಜೀವನ ಶೈಲಿಯನ್ನು ಯಾವ ರೀತಿ ರೂಢಿಸಿಕೊಳ್ಳಬೇಕು ಹಾಗೂ ಕ್ರಿಯಾತ್ಮಕವಾಗಿ ಹೇಗಿರಬೇಕು ಎಂದು ಸಲಹೆ ನೀಡಿದರು.
ಚಂದ್ರಾ ಶೆಟ್ರು, ರೇಣುಕಾ ಪ್ರಾರ್ಥಿಸಿದರು.ಪುಷ್ಪಾ ಬಸವರಾಜ್ ಸ್ವಾಗತಿಸಿದರು. ಗೀತಾ ರೆಡ್ಡಿ ವಂದಿಸಿದರು.
ಹೇಮಾ ಜಿ. ಶೇಟ್ ಅತಿಥಿಗಳನ್ನು ಪರಿಚಯಿಸಿದರು. ಇಂದಿರಾ ರೆಡ್ಡಿ ಹಾಗೂ ಲತಾ ಸತೀಶ್ ಬಹುಮಾನಗಳ ವಿವರಣೆ ನೀಡಿದರು. ಭುವನ ಚಂದ್ರಶೇಖರ್, ಸುಧಾ ಪಾಟೀಲ್ ಗೌರವ ಸಮರ್ಪಣೆ ಸಲ್ಲಿಸಿದರು. ಶ್ರೀಮತಿ ರತ್ನಾ ರೆಡ್ಡಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಯಶೋಧ ರಾಜಗೋಪಾಲ್ ರೆಡ್ಡಿ ಪ್ರಸಾದದ ವ್ಯವಸ್ಥೆ ಮಾಡಿದರು.