ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಂಘದಲ್ಲಿ ಗಾಂಧೀಜಿ-ಶಾಸ್ತ್ರೀಜಿ ಜಯಂತಿ

ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಂಘದಲ್ಲಿ ಗಾಂಧೀಜಿ-ಶಾಸ್ತ್ರೀಜಿ ಜಯಂತಿ

ದಾವಣಗೆರೆ, ಅ.3- ನಗರದ ಪಿ.ಜೆ. ಬಡಾವಣೆಯ ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಂಘದ ಆಶ್ರಯದಲ್ಲಿ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜಯಂತಿ ಆಚರಿಸಲಾಯಿತು.

ಶಾಸಕ ಶಾಮನೂರು ಶಿವಶಂಕರಪ್ಪ ಅವರು ಗಾಂಧೀಜಿ ಸ್ಮಾರಕದ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತ ನಾಡುತ್ತಾ, ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡುತ್ತಾ, ಒಗ್ಗಟ್ಟಿನಿಂದ ಸಂಸ್ಥೆಯನ್ನು ನಡೆಸಿಕೊಂಡು ಹೋಗಬೇಕು ಎಂದು ಅವರು ತಿಳಿಸಿದರು.

ಈ ಸಂಸ್ಥೆಗೆ ಗಾಂಧೀಜಿಯವರು 1934ರಲ್ಲಿ ಗುದ್ದಲಿ ಪೂಜೆ ನೆರವೇರಿಸಿರುತ್ತಾರೆ. ಸಂಸ್ಥೆಯವರು ಗಲಾಟೆ-ಗದ್ದಲ, ಭಿನ್ನಾಭಿ ಪ್ರಾಯ ಮರೆತು ಸಂಸ್ಥೆಯನ್ನು ಬೆಳೆಸಿಕೊಂಡು ಹೋಗಬೇಕೆಂದು ಕರೆ ನೀಡಿದರು.

ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಮಾತನಾಡಿ, ಗಾಂಧೀಜಿ ಹಾಗೂ ಶಾಸ್ತ್ರೀಜಿಯವರ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ, ಗಾಂಧೀಜಿಯವರು ಕಾಲ್ನಡಿಗೆಯಲ್ಲಿ ಗಾಂಧಿನಗರದಿಂದ ಇಲ್ಲಿಗೆ ಬಂದು ಹಾಸ್ಟೆಲ್ ಜಾಗ ತೋರಿಸಿ, ಅವರ ಹಸ್ತದಿಂದ ಗುದ್ದಲಿ ಪೂಜೆ ಮಾಡಿರುವುದು ನಮ್ಮ-ನಿಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ ಎಂದರು.

ಸಂಸ್ಥೆಯ ಕಾರ್ಯದರ್ಶಿ ಬಿ.ಹೆಚ್. ವೀರಭದ್ರಪ್ಪ ಸ್ವಾಗತಿಸಿದರು. ಅಧ್ಯಕ್ಷ ಎಲ್.ಎಂ. ಹನುಮಂತಪ್ಪ, ಉಪಾಧ್ಯಕ್ಷ ಬಿ.ಎಂ. ರಾಮಸ್ವಾಮಿ, ಜಂಟಿ ಕಾರ್ಯದರ್ಶಿ ಕೆ. ಚಂದ್ರಣ್ಣ, ನಿರ್ದೇಶಕರುಗಳಾದ ಬಿ.ಎಂ. ಈಶ್ವರ್, ಮಂಜಪ್ಪ ಹಲಗೇರಿ, ಮಲ್ಲೇಶ್ ಕುಕ್ಕುವಾಡ, ಸಾಗರ್, ಸದಸ್ಯರಾದ ಶಿವ ಮೂರ್ತಿ ಬಿ.ಆರ್., ಬಿ.ಎಲ್.  ಪರಶುರಾಮ್, ಜಿ. ರಾಕೇಶ್ ಮತ್ತು ಇತರರು ಉಪಸ್ಥಿತರಿದ್ದರು.

error: Content is protected !!