ದಾವಣಗೆರೆ, ಅ. 2 – ಯೂರೋ ಶಾಲೆಯಲ್ಲಿ ಗಾಂಧಿ ಜಯಂತಿಯ ಅಂಗವಾಗಿ `ಸ್ವಚ್ಛತಾ ಅರಿವು ಜಾಥಾ’ ಹಮ್ಮಿಕೊಳ್ಳಲಾಗಿತ್ತು.
ಶಾಲೆಯ ಕಾರ್ಯದರ್ಶಿ ಡಿ.ವಿ. ನಾಗರಾಜ ಶೆಟ್ಟಿ ಜಾಥಾ ಉದ್ಘಾಟಿಸಿದರು.
ಯುರೋ ಶಾಲೆಯಿಂದ ಶಾಮನೂರು ಸರ್ಕಲ್‌ವರೆಗೆ ನಡೆದ ಜಾಥಾದಲ್ಲಿ ಸ್ವಚ್ಚತೆಯ ಬಗ್ಗೆ ಹಾಗೂ ದುಶ್ಚಟಗಳಿಂದ ದೂರವಿರುವ ಕುರಿತು ಕೆಲವು ವಿಚಾರಗಳನ್ನು ಅರ್ಥಪೂರ್ಣವಾಗಿ ತಿಳಿಸಲಾಯಿತು.
ಜಾಥಾದಲ್ಲಿ ಕಲ್ಲಳ್ಳಿ ರುದ್ರೇಶ್, ಕಾರ್ಯದರ್ಶಿ ನಾಗರಾಜ ಶೆಟ್ಟಿ, ಪ್ರಾಂಶುಪಾಲರಾದ ಶ್ರೀಮತಿ ಜಯಶ್ರೀ ಗುಜ್ಜರ್, ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.
ಶಾಲೆಯ ಆವರಣದಲ್ಲಿ ಗಾಂಧಿ ಜಯಂತಿಯನ್ನು ಭಜನೆ ಹಾಗೂ ರಸಪ್ರಶ್ನೆ ಕಾರ್ಯಕ್ರಮದೊಂದಿಗೆ ಸರಳವಾಗಿ, ಅರ್ಥಪೂರ್ಣವಾಗಿ ಆಚರಿಸಲಾಯಿತು.