ಮಲೇಬೆನ್ನೂರು, ಅ.2- ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹರಿಹರ ಮತ್ತು ಮಲೇಬೆನ್ನೂರು ಯೋಜನಾಧಿಕಾರಿಗಳ ಕಚೇರಿ ವತಿಯಿಂದ ನಾಳೆ ದಿನಾಂಕ 3ರ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ಗಾಂಧಿ ಸ್ಮೃತಿ, ಜನ ಜಾಗೃತಿ ಸಮಾವೇಶ ವನ್ನು ಸರ್ವಧರ್ಮ ಗುರುಗಳ ಸಾನ್ನಿಧ್ಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ಹೊನ್ನಾಳಿ ಬಾಬಣ್ಣ ತಿಳಿಸಿದರು.
ಈ ಸಂಬಂಧ ಕಳೆದ ಭಾನುವಾರ ಹರಿಹರ ಯೋಜ ನಾಧಿಕಾರಿಗಳ ಕಛೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಹಾಗೂ 1705ನೇ ಮದ್ಯವರ್ಜನೆ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರೂ ಆದ ಜಿ. ಮಂಜುನಾಥ್ ಪಟೇಲ್, ಹರಿಹರ ಯೋಜನಾಧಿಕಾರಿ ಗಣಪತಿ ಮಾಳಂಜಿ ಮತ್ತು ಮಲೇಬೆನ್ನೂರು ಯೋಜನಾಧಿಕಾರಿ ವಸಂತ್ ದೇವಾಡಿಗ ಅವರು ಮಾತನಾಡಿದರು.
ಜಿಲ್ಲಾ ಜನಜಾಗೃತಿ ವೇದಿಕೆಯ ನೂತನ ಉಪಾಧ್ಯಕ್ಷ ಸಿರಿಗೆರೆ ನಾಗನಗೌಡ್ರು, ನಿಕಟಪೂರ್ವ ಉಪಾಧ್ಯಕ್ಷ ಕೊಂಡಜ್ಜಿ ರಾಜಶೇಖರ್, ಸದಸ್ಯರಾದ ಬೆಳ್ಳೂಡಿ ರವಿಶಂಕರ್, ಜಿಗಳಿ ಪ್ರಕಾಶ್, ಪದ್ಮರಾಜ್ ಜೈನ್, ಶ್ರೀಮತಿ ಶುಭ, ಜ್ಞಾನವಿಕಾಸ ಸಮನ್ವಯಾಧಿಕಾರಿಗಳಾದ ಸವಿತಾ, ಭಾರತಿ, ಹರಿಹರ ಕಛೇರಿಯ ಪ್ರಬಂಧಕ ನಿಂಗರಾಜ್, ವಲಯ ಮೇಲ್ವಿಚಾರಕ ಚಂದ್ರಪ್ಪ ಸಭೆಯಲ್ಲಿದ್ದರು.