`ರಕ್ತದಾನ ಮಹಾದಾನ’ ಎನ್ನುವ ಮಾತು ಮೌಲ್ಯಯುತ

`ರಕ್ತದಾನ ಮಹಾದಾನ’ ಎನ್ನುವ ಮಾತು  ಮೌಲ್ಯಯುತ

ದಾವಣಗೆರೆ, ಸೆ.30- `ರಕ್ತದಾನ ಮಹಾ ದಾನ’ ಎನ್ನುವ   ಮಾತು ತುಂಬ ಮೌಲ್ಯಯುತ ವಾದದ್ದು. ಏಕೆಂದರೆ ರಕ್ತದಾನ ಮಾಡುವ ಮೂಲಕ ಒಂದು ಜೀವವನ್ನು ಉಳಿಸಬಹುದು. ಆದ್ದರಿಂದಲೇ ಈ ಮಾತು ಅಷ್ಟೊಂದು ಮಹತ್ವ ಪಡೆದಿದೆ ಎಂದು ಡಾ.ಕುಲಕರ್ಣಿ ತಿಳಿಸಿದರು.

ನಗರದ ಎ.ವಿ.ಕೆ ಮಹಿಳಾ ಕಾಲೇಜಿನಲ್ಲಿ ಎಸ್.ಎಸ್ ಕೇರ್ ಟ್ರಸ್ಟ್ ಮತ್ತು ಎನ್.ಎಸ್.ಎಸ್., ಎನ್.ಸಿ.ಸಿ., ಯೂತ್ ರೆಡ್ ಕ್ರಾಸ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ  `ರಕ್ತದಾನ ಅರಿವು’    ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗುತ್ತದೆ. ಹೃದಯ ಸಂಬಂಧಿ ಕಾಯಿಲೆಗಳು ದೂರವಾಗುತ್ತವೆ. ಎಸ್.ಎಸ್ ಕೇರ್ ಟ್ರಸ್ಟ್  ಜಿಲ್ಲೆಯ ಬಡಜನರಿಗೆ ರಕ್ತ ನೀಡುವ ಮೂಲಕ ಅನೇಕ ಜನರ ಜೀವ ಉಳಿಸಿದೆ.   ಜನ ರಕ್ತದ ಕೊರತೆಯಿಂದ ತೊಂದರೆಗೆ ಸಿಲುಕಬಾರದು ಎಂಬ ಆಶಯದಿಂದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಈ ಎಸ್.ಎಸ್ ಕೇರ್ ಟ್ರಸ್ಟ್ ಸ್ಥಾಪನೆ ಮಾಡಿದ್ದಾರೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕಮಲಾ ಸೊಪ್ಪಿನ್  ಮಾತನಾಡಿ, ಮಹಿಳೆಯರು ಪೋಷಕಾಂಶಯುಕ್ತ ಆಹಾರವನ್ನು ಸೇವಿಸುವ ಮೂಲಕ ರಕ್ತವನ್ನು ದೇಹದಲ್ಲಿ ಹೆಚ್ಚಿಸಿಕೊಳ್ಳಬೇಕು. ರಕ್ತದಾನದ ಬಗ್ಗೆ ಅನೇಕ ತಪ್ಪು ಕಲ್ಪನೆಗಳಿವೆ. ಆ ತಪ್ಪು ಕಲ್ಪನೆಗಳನ್ನು ಈ ಕಾರ್ಯಕ್ರಮ ದೂರ ಮಾಡಿದೆ, ನೀವೆಲ್ಲರೂ ರಕ್ತದಾನ ಮಾಡಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಾ.ಸೀಮಾ ಬಿಜ್ಜರಗಿ, ಡಾ. ನೀತು ಜಿ.ವಿ, ಕಾಲೇಜಿನ ಐಕ್ಯೂಎಸಿ ಸಂಯೋಜಕ  ಪ್ರೊ. ಶಿವಕುಮಾರ್ ಆರ್.ಆರ್., ಪ್ರಭಾವತಿ ಎಸ್. ಹೊರಡಿ, ಡಾ.ಲೋಹಿತ್ ಹೆಚ್.ಎಂ., ಶ್ರೀಮತಿ ಉಷಾ ಎಂ.ಆ‌ರ್., ಶ್ರೀಮತಿ ದಿವ್ಯ ಟಿ., ಶ್ರೀಮತಿ ಉಷಾ ಎಲ್. ಉಪಸ್ಥಿತರಿದ್ದರು. ಕಾವ್ಯಶ್ರೀ ಡಿ.ಎಂ ಸ್ವಾಗತಿಸಿದರು. ನಿಸರ್ಗ ಕೆ. ವಂದಿಸಿದರು. ಅಶ್ವಿನಿಬಾಯಿ ಯು., ವೀಣಾ ಹೆಚ್.ಕೆ ಪ್ರಾರ್ಥಿಸಿದರು. ಸಹನಾ ಸಾವಳಗಿ ಮತ್ತು ಮಸೀರಾ ಕೌಸರ್ ನಿರೂಪಿಸಿದರು.

error: Content is protected !!