ಸರ್ಕಾರಿ ಕಾಲೇಜು ವಿದ್ಯಾರ್ಥಿಗಳ ಸಾಧನೆ

ಸರ್ಕಾರಿ ಕಾಲೇಜು ವಿದ್ಯಾರ್ಥಿಗಳ ಸಾಧನೆ

ದಾವಣಗೆರೆ, ಅ.1- ಮಧ್ಯ ಕರ್ನಾಟಕ ಐರನ್ ಗೇಮ್ ಅಸೋಸಿಯೇಷನ್ ಸಾಯಿ ಜಿಮ್ ವತಿಯಿಂದ ನಡೆದ ಓಪನ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ  ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಒಟ್ಟು 14  ಮಹಿಳಾ ಮತ್ತು ಪುರುಷ ಕ್ರೀಡಾಪಟುಗಳು ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ.   

ಕೆ. ಪಿ. ಮಂಜುನಾಥ್,   ಶಿವರಾಜ್ ಎಸ್. ಜಿ., ಅಜಯ್ ಕುಮಾರ್,    ನವೀನ್ ಎಚ್.ಎಸ್., ಸಿದ್ದೇಶ್ ಎಂ.ಎಸ್.,  ಭಾಸ್ಕರ್ ಕೆ.ಎನ್., ಕರಿಸಿದ್ದಪ್ಪ ಭರಮಪ್ಪ ಪೂಜಾರ, ಅನುಷಾ ಬಂಡ್ಗರ್,  ಸಹನಾ,   ಯಾಸ್ಮೀನ್ ಕೆ. ವೈ.  ಮತ್ತು   ಸುಮತಿ    ಇವರುಗಳು  ಪ್ರಶಸ್ತಿ ಗಳಿಸಿದ್ದಾರೆ.

 ವಿಜೇತ ಕ್ರೀಡಾಪಟುಗಳನ್ನು ಕಾಲೇಜಿನ ಪ್ರಾಂಶುಪಾಲ  ಡಾ. ಎಸ್.ಆರ್ ಆಂಜನಪ್ಪ, ಪತ್ರಾಂಕಿತ ವ್ಯವಸ್ಥಾಪಕಿ ಗೀತಾದೇವಿ,  ದೈಹಿಕ ಶಿಕ್ಷಣ ನಿರ್ದೇಶಕಿ ಡಾ. ರೇಖಾ ಎಂ.ಆರ್. ಅಭಿನಂದಿಸಿದ್ದಾರೆ.

error: Content is protected !!