ದಾವಣಗೆರೆ, ಅ. 1- ವಿಜ್ಞಾನ ಮತ್ತು ತಂತ್ರಜ್ಞಾನದ ಈ ಕಾಲಘಟ್ಟದಲ್ಲಿ ಮೂಢನಂಬಿಕೆಯಿಂದ ಉಂಟಾಗುವ ಹಾನಿ ಪರಿಸರ ಮಾಲಿನ್ಯಕ್ಕಿಂತಲೂ ಹೆಚ್ಚು ಅಪಾಯಕಾರಿ ಎಂದು ಹುಲಿಕಲ್ ನಟರಾಜ್ ತಿಳಿಸಿದರು.
ನಗರದ ರಾಘವೇಂದ್ರ ಹೈಟೆಕ್ ಪಿಯು ಕಾಲೇಜಿನಲ್ಲಿ ಪವಾಡ ಗುಟ್ಟು ಬಯಲು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಾಚಾರ್ಯ ಡಾ. ಅನಿಲ್ ಕುಮಾರ್ ಶ್ಯಾಗಲೆ ಮಾತನಾಡಿ, ಮೂಢನಂಬಿಕೆಗಳಿಂದ ಮಾನಸಿಕ ಆರೋಗ್ಯ ಕೆಡುತ್ತದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ ಜಿಲ್ಲಾಧ್ಯಕ್ಷ ಡಾ.ಜಗದೀಶ್ ಕುಮಾರ್ ಶ್ಯಾಗಲೆ, ಪದಾಧಿಕಾರಿಗಳಾದ ವೀರೇಶ್, ಸುರೇಶ್ ಮತ್ತಿತರರಿದ್ದರು.
ಕನ್ನಡ ಉಪನ್ಯಾಸಕ ಎಂ.ಆರ್. ಹರೀಶ್ ನಿರೂಪಿಸಿದರು. ಉಪನ್ಯಾಸ ವೃಂದವರು, ಮತ್ತಿತರರು ಭಾಗಹಿಸಿದ್ದರು.