ಸಂವಿಧಾನ ರಚನೆಯಾಗುವ ಪೂರ್ವದಲ್ಲಿಯೇ ಆಶಯ ಪೂರೈಸಿದ್ದ ಶಿವಕುಮಾರ ಸ್ವಾಮೀಜಿ

ಸಂವಿಧಾನ ರಚನೆಯಾಗುವ ಪೂರ್ವದಲ್ಲಿಯೇ ಆಶಯ ಪೂರೈಸಿದ್ದ ಶಿವಕುಮಾರ ಸ್ವಾಮೀಜಿ

ಬೆಂಗಳೂರು, ಅ.1- ದೇಶದ ಸಂವಿಧಾನ ರಚನೆಯಾಗುವ ಪೂರ್ವದಲ್ಲಿಯೇ ಸಂವಿಧಾನ ದಲ್ಲಿರುವ ಆಶೋತ್ತರಗಳನ್ನು ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಪೂರೈಸಿದ್ದರು ಎಂದು ತರಳಬಾಳು ಬೃಹನ್ಮಠದ ಜಗದ್ಗುರು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಇಲ್ಲಿನ ಆರ್‌.ಟಿ. ನಗರದಲ್ಲಿರುವ ತರಳಬಾಳು ಕೇಂದ್ರದಲ್ಲಿ ಶ್ರದ್ಧಾಂಜಲಿ ಸಮರ್ಪಣೆ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ನಾಡಿನ ಶೈಕ್ಷಣಿಕ, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಿಗೆ ಅನುಪಮ ಸೇವೆ ಸಲ್ಲಿಸಿದ ಶ್ರೀಗಳು ಬಸವಣ್ಣನವರ ತತ್ವಗಳನ್ನು ತಲೆಯ ಮೇಲೆ ಹೊತ್ತು ಸಾಗಿದ್ದರು ಎಂದರು.

ರಾಜ್ಯ ಸರ್ಕಾರ ಜಾರಿಗೊಳಿಸಿರುವ ಐದು ಗ್ಯಾರಂಟಿಗಳಿಂದ ಜನರಿಗೆ ಸಂತೋಷವೇ ಆಗಿದೆ. ಕೃಷಿ ಕ್ಷೇತ್ರ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಸಕಾಲದಲ್ಲಿ ಮಳೆ, ಬೆಳೆಯಾಗದೆ ಜನರು ಸಂಕಷ್ಟಕ್ಕೆ ಈಡಾಗುತ್ತಿ ದ್ದಾರೆ. ಆದುದರಿಂದ ಸರ್ಕಾರವು ಆರನೆಯ ಗ್ಯಾರಂಟಿಯನ್ನಾಗಿ ರಾಜ್ಯದ ಎಲ್ಲಾ ಕೆರೆಗಳನ್ನು ಏತ ನೀರಾವರಿ ಮೂಲಕ ತುಂಬಿಸುವ ಯೋಜನೆ ಜಾರಿಗೆ ತರಬೇಕು. ಆಗ ಕೃಷಿ ವಲಯದ ಜನರು ಇನ್ನಷ್ಟು ಸಂತೋಷಪಡುತ್ತಾರೆ ಎಂದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬಿ.ಎಲ್. ಶಂಕರ್, ಬಿ.ಎಸ್. ಯಡಿಯೂರಪ್ಪ, ಶಂಕರ ಬಿದರಿ, ಹಂಪನಾ, ಕೆನಡಾದ ಗಿಲ್ ಆರ್.ಟಿ. ಹರಿಟ್ ಮಾತನಾಡಿದರು. ಮಾಜಿ ಸಚಿವ ಎಚ್‌. ಆಂಜನೇಯ, ಬೇಲೂರು ಭಕ್ತಿ ಶಾಸಕ ಸುರೇಶ್, ಮಾಯಕೊಂಡ ಶಾಸಕ ಬಸವಂತಪ್ಪ, ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ ಉಪಸ್ಥಿತರಿದ್ದರು. 

ಬೆಂಗಳೂರಿಗರ ಮನ ಗೆದ್ದ ಮಕ್ಕಳು: ಶ್ರದ್ಧಾಂಜಲಿ ಭಕ್ತಿ ಸಮರ್ಪಣೆ ಸಮಾರಂಭದಲ್ಲಿ ಸಿರಿಗೆರೆ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ಮಲ್ಲಕಂಬ ವಿಶೇಷ ಆಕರ್ಷಣೆಯಾಗಿತ್ತು. ಒಂಟಿ ಕಂಬಗಳ ಮೇಲೆ ಲೀಲಾಜಾಲವಾಗಿ ವಿದ್ಯಾರ್ಥಿಗಳು ಹಲವು ಪ್ರದರ್ಶನಗಳನ್ನು ನೀಡಿದ್ದು ರೋಮಾಂಚನಗೊಳಿಸಿತು. ಜೊತೆಗೆ ಕಡಲತೀರದ ಕಲೆ ಯಕ್ಷಗಾನವನ್ನು ವಿದ್ಯಾರ್ಥಿನಿಯರು ಪ್ರದರ್ಶಿಸಿದರು.

error: Content is protected !!