ಹರಪನಹಳ್ಳಿ, ಅ. 1- ಶ್ರೀ ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ ನಮ್ಮ ಮಠಕ್ಕೆ ಸಿಕ್ಕಿರುವುದು ನಮ್ಮೆಲ್ಲರ ಪುಣ್ಯ. ಶ್ರೀಗಳ ಪಟ್ಟಾಭಿಷೇಕವಾದ ಮೇಲೆ ಕಾಯಕ, ಶಿಕ್ಷಣ, ದಾಸೋಹಕ್ಕೆ ಹೆಚ್ಚು ಒತ್ತು ನೀಡುತ್ತಾ ಬಂದಿದ್ದಾರೆ ಎಂದು ಸಂಸದ ವೈ. ದೇವೇಂದ್ರಪ್ಪ ಹೇಳಿದರು.
ತಾಲ್ಲೂಕಿನ ಅರಸೀಕೆರೆ ಶ್ರೀ ಕೋಲ ಶಾಂತೇಶ್ವರ ಮಠದಲ್ಲಿ ಕೈಗಾರಿಕಾ ತರಬೇತಿ ರಜತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಟ್ಟಾಭಿಷೇಕ ಆದಾಗಿನಿಂದಲೂ ಶ್ರೀಗಳು ಹಗಲಿರುಳು ಕಾಯಕ ಮಾಡಿ, ಅನೇಕ ಶಿಕ್ಷಣ ಸಂಸ್ಥೆಗಳನ್ನು ತೆರೆದಿದ್ದಾರೆ, ಅಧ್ಯಾತ್ಮಿಕದ ಜೊತೆಗೆ ಕಾಯಕ ಯೋಗಿ, ಶಿಕ್ಷಣ ಪ್ರೇಮಿಯಾಗಿ, ನಮ್ಮೆಲ್ಲರಿಗೂ ನಡೆದಾಡುವ ದೇವರಾಗಿದ್ದಾರೆ ಎಂದು ಬಣ್ಣಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಗಳೂರಿನ ಶಾಸಕ ಬಿ.ದೇವೇಂದ್ರಪ್ಪ ಅವರು ಕಾಯಕ ಯೋಗಿ, ನಡೆದಾಡುವ ದೇವರು, ಕಾಯಕದಿಂದಲೇ ಮಠ, ಶಿಕ್ಷಣ, ದಾಸೋಹ, ತಾವೇ ಸ್ವತಃಹ ಹೊಲದಲ್ಲಿ ಉಳುಮೆ ಮಾಡುವುದು ಹಾಗೂ ಮೇಲು, ಕೀಳು ಎನ್ನದೇ ಎಲ್ಲರೂ ಸಮಾನರು ಎಂದು ಭಾವಿಸಿದವರು ಈ ಶ್ರೀಗಳು ಎಂದರು
ಶ್ರೀ ಅಡವಿಹಳ್ಳಿ ಮಠದ ಅಜ್ಜಯ್ಯ ಸ್ವಾಮಿಗಳು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಸುಶೀಲ್ ನಮೋಶಿ, ಉತ್ತಂಗಿಯ ಶ್ರೀ ಸೋಮಶೇಖರ್ ಮಹಾಸ್ವಾಮಿಗಳು, ಹನಸಿ ಇಬ್ರಾಹಿಂ ನಾಗನೂರು ಮಾತನಾಡಿದರು.
ಕೊಟ್ಟೂರು ಶ್ರೀ ಶಂಕರ ಸ್ವಾಮಿಗಳು, ನೀಲಗುಂದ ಚನ್ನಬಸವ ಸ್ವಾಮಿಗಳು, ಸಂಡೂರು ಶ್ರೀ ಪ್ರಭು ಸ್ವಾಮಿಗಳು, ವಕೀಲ ಮಹಾಂತೇಶ್ ಹೊಸಮಠ ಇವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ವೈ.ಡಿ. ಅಣ್ಣಪ್ಪ, ಪ್ರಶಾಂತ್ ಪಾಟೀಲ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಇನಾಯತ್ ಉಲ್ಲಾ, ಹೆಚ್.ನಾಗರಾಜಪ್ಪ, ಬಿ. ರಾಮಪ್ಪ, ಕೆ.ಎಂ.ವಿಶ್ವನಾಥಯ್ಯ, ಪೂಜಾರ್ ಮರಿಯಪ್ಪ, ಚಂದ್ರಪ್ಪ, ತೌಡೂರು ಮಂಜಯ್ಯ, ಜಿ. ವಿ. ವೆಂಕಟೇಶ್ ಶೆಟ್ರು, ಶೆಡ್ಡೇರ ಆನಂದಪ್ಪ, ಪಲ್ಲಾಗಟ್ಟಿ ಶೇಕ್ರಪ್ಪ, ಹೆಚ್.ಪಂಪಣ್ಣ, ಬಾಲೇನಹಳ್ಳಿ ಕೆಂಚನಗೌಡ, ಸುತ್ತಮುತ್ತಲ ಊರಿನ ಮುಖಂಡರು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.