ಚನ್ನಗಿರಿ, ಸೆ.28- ಚನ್ನಗಿರಿ ತಾಲ್ಲೂಕು ಕುರುಬ ಸಮಾಜದ ನೂತನ ಅಧ್ಯಕ್ಷರಾಗಿ ಬೆಳಲಗೆರೆಯ ದೇವೀರಿ ಶಿವಣ್ಣ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಈ ಹಿಂದೆ ಸಿ.ಕೆ.ಹೆಚ್ ಮಹೇಶ್ವರಪ್ಪ ಅಧ್ಯಕ್ಷರಾಗಿದ್ದರು. ಭಾನುವಾರ ಸೂಳೆಕೆರೆ ಸಿದ್ದೇಶ್ವರ ಸಮುದಾಯ ಭವನದಲ್ಲಿ ಜರುಗಿದ ಚನ್ನಗಿರಿ ತಾಲ್ಲೂಕಿನ ಕುರುಬ ಸಮಾಜದ ಮುಖಂಡರ ಸಭೆಯಲ್ಲಿ ಶಿವಣ್ಣ ಅವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಜಿ.ಎಸ್. ದೇವೇಂದ್ರಪ್ಪ, ಹೆಚ್.ಹೊನ್ನಪ್ಪ, ಹಾಲಪ್ಪ, ಕರೆಕಟ್ಟೆ ಮಂಜಪ್ಪ ಮತ್ತು ಸಮಾಜದ ಮುಖಂಡರು ಹಾಜರಿದ್ದರು.