ರಾಣೇಬೆನ್ನೂರು, ಸೆ. 27- ತಾಲ್ಲೂಕು ದಸರಾ ಕ್ರೀಡಾಕೂಟದಲ್ಲಿ ಇಲ್ಲಿನ ಬಿಎಜೆಎಸ್ಎಸ್ ಮಹಿಳಾ ಮಹಾವಿದ್ಯಾಲಯ ಕಬಡ್ಡಿಯಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ಕ್ರೀಡಾ ಪಟುಗಳಿಗೆ ಬಿ.ಎ.ಜೆ.ಎಸ್.ಎಸ್. ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ. ಆರ್.ಎಂ. ಕುಬೇರಪ್ಪ ಅಭಿನಂದಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ಡಾ. ಸುರೇಶ್ ಬಿ. ಬಣಕಾರ, ದೈಹಿಕ ಶಿಕ್ಷಣ ನಿರ್ದೇಶಕರಾದ ಎಸ್.ಎಚ್. ಹುಚ್ಚ ಗೊಂಡರ, ಅಭಿಷೇಕ ಅಡ್ಡೇರ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
January 12, 2025