ವಿಭಾಗೀಯ ಮಟ್ಟಕ್ಕೆ ಜಗಳೂರು ತಾ. ಕ್ರೀಡಾಪಟುಗಳು

ವಿಭಾಗೀಯ ಮಟ್ಟಕ್ಕೆ ಜಗಳೂರು ತಾ. ಕ್ರೀಡಾಪಟುಗಳು

ಜಗಳೂರು, ಸೆ. 27- ತಾಲ್ಲೂಕಿನ ವಿವಿಧ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಜಿಲ್ಲಾಮಟ್ಟದ ವಿವಿಧ ಕ್ರೀಡೆಗಳಲ್ಲಿ ಪ್ರಥಮ ಸ್ಥಾನ ಗಳಿಸಿ, ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಹುಚ್ಚವ್ವನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಾಲಕಿಯರು ಚನ್ನಗಿರಿ ತಾಲ್ಲೂಕು ಕ್ರೀಡಾಂಗಣದಲ್ಲಿ  ನಡೆದ ಥ್ರೋ ಬಾಲ್ ಅಂತಿಮ ಪಂದ್ಯಾವಳಿಯಲ್ಲಿ  ಹರಿಹರ ತಂಡವನ್ನು ಮಣಿಸಿ ಪ್ರಥಮ ಸ್ಥಾನ ಪಡೆದು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ದೈಹಿಕ ಶಿಕ್ಷಕರೇ ಇಲ್ಲದ ಶಾಲೆಯಲ್ಲಿ ಸಹ ಶಿಕ್ಷಕ ಕೊಟ್ರೇಶ್, ಮುಖ್ಯ ಶಿಕ್ಷಕ ಗೋವಿಂದಪ್ಪ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದರು.ವಿಜೇತರಿಗೆ ಎಸ್‌ಡಿಎಂಸಿ ಅಧ್ಯಕ್ಷ ಹೆನ್ನಪ್ಪ, ಗ್ರಾಮಸ್ಥರಾದ  ಕೊಟ್ರೇಶ್, ಲಕ್ಷ್ಮಣ, ರವಿ, ಮನು, ಸೇರಿದಂತೆ ಹಲವರು ಶುಭ ಹಾರೈಸಿದ್ದಾರೆ.

ಜಗಳೂರು ಗೊಲ್ಲರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಾಲಕರು ಚನ್ನಗಿರಿ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ ಥ್ರೋ ಬಾಲ್ ಫೈನಲ್ ಪಂದ್ಯದಲ್ಲಿ ದಾವಣಗೆರೆ ಸೆಂಟ್ ಮೇರಿಸ್ ಶಾಲೆಯ ಬಾಲಕರೊಂದಿಗೆ ಉತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಗಳಿಸಿ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿಜೇತರಿಗೆ ತರಬೇತುದಾರರು ಹಾಗೂ  ಸಹ ಶಿಕ್ಷಕರಾದ ರುದ್ರಮುನಿ, ಎಸ್.ಓಂಕಾರಮ್ಮ, ಎಸ್‌ಡಿ ಎಂಸಿ ಅಧ್ಯಕ್ಷ ತಿಪ್ಪೇಸ್ವಾಮಿ ಅಭಿನಂದನೆ ಸಲ್ಲಿಸಿದ್ದಾರೆ.

ಯರ್ಲಕಟ್ಟೆ ಪ್ರೌಢಶಾಲೆಯ ಬಾಲಕಿಯರ ಬ್ಯಾಡ್ಮಿಂಟನ್ ತಂಡ ಜಿಲ್ಲಾ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

 ಈಚೆಗೆ ನಡೆದ ದಸರಾ ಕ್ರೀಡಾಕೂಟದಲ್ಲಿ ಇದೇ ತಂಡ ಜಿಲ್ಲಾ ಮಟ್ಟದಲ್ಲಿ ಸೆಣಸಾಡಿ ಗಮನ ಸೆಳೆದಿತ್ತು. ತಂಡಕ್ಕೆ ಮುಖ್ಯ ಶಿಕ್ಷಕ  ಮಹಾಂತೇಶ್  ಅಭಿನಂದನೆ ಸಲ್ಲಿಸಿದ್ದಾರೆ.

error: Content is protected !!