ದೇವದಾಸಿ ಮಹಿಳೆಯರಿಗೆ ಸೂಕ್ತ ಸೌಲಭ್ಯ ಕಲ್ಪಿಸಬೇಕು

ದೇವದಾಸಿ ಮಹಿಳೆಯರಿಗೆ ಸೂಕ್ತ ಸೌಲಭ್ಯ ಕಲ್ಪಿಸಬೇಕು

ಹರಪನಹಳ್ಳಿ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ. ಅಜ್ಜಣ್ಣ ಆಗ್ರಹ

ಹರಪನಹಳ್ಳಿ, ಸೆ.27- ಜೀವನದ ಸಂಧ್ಯಾಕಾಲದಲ್ಲಿ ದೈಹಿಕ, ಮಾನಸಿಕ, ಬೌದ್ಧಿಕವಾಗಿ ಅಪಾರ ನೋವು, ತೊಂದರೆ ಅನುಭವಿಸುವ ದೇವದಾಸಿ ಮಹಿಳೆಯರಿಗೆ ಸರ್ಕಾರ ಸೂಕ್ತ ಸೌಲಭ್ಯ ಕಲ್ಪಿಸಲಿ ಎಂದು ವಕೀಲರ ಸಂಘದ ಅಧ್ಯಕ್ಷ ಎಂ. ಅಜ್ಜಣ್ಣ ಆಗ್ರಹಿಸಿದರು.

ಪಟ್ಟಣ ತಾಲ್ಲೂಕು ವಿಕಲಚೇತನರ ಭವನ ಪಂಚಾಯತಿ ಸಭಾಂಗಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ದೇವದಾಸಿ ಮಹಿಳೆಯರಿಗೆ ಸರ್ಕಾರದ ಸೌಲಭ್ಯ ಕಲ್ಪಿಸುವ ಕಾರ್ಯಕ್ರಮ ಉದ್ಘಾಟಿಸಿ ಬಳಿಕ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷ ಬಿ. ಗೋಣಿಬಸಪ್ಪ ಮಾತನಾಡಿ,  ಜೀವನದಲ್ಲಿ ಬಡತನ, ಅಜ್ಞಾನ, ಅನಕ್ಷರತೆ, ಮೂಢನಂಬಿಕೆ ಮುಂತಾದ ಕಾರಣಗಳಿಂದ ಅನಿಷ್ಟ ದೇವದಾಸಿ ಪದ್ಧತಿಗೆ ಸಿಲುಕಿ ಪರಿತಪಿಸುವ ಮಹಿಳೆಯರು ಕೊನೆಗಾಲದಲ್ಲಿ ಕುಟುಂಬದವರ ಪ್ರೀತಿ, ಆರೈಕೆಯಿಂದ ವಂಚಿತರಾಗಿ ನಾನಾ ರೋಗಗಳಿಗೆ ತುತ್ತಾಗಿ ಒಂಟಿತನದಿಂದ, ಮನೋವಿಕಲತೆಯಿಂದ, ದೈಹಿಕ ತೊಂದರೆಯಿಂದ ಬಳಲುವರು, ಶೋಷಣೆಯಿಂದ ಅವರು ಹೊರಬರಲು ಸಂಕಲ್ಪ ಮಾಡಬೇಕಿದೆ ಎಂದರು.

ವಕೀಲ ಎಂ.ಮೃತ್ಯುಂಜಯ ಮಾತನಾಡಿ, ಅವರ ಕುಟುಂಬ ವರ್ಷದ ಮಹಿಳೆಯರು, ಮಕ್ಕಳು ಇಂತಹ ಅನಿಷ್ಟ ಪದ್ಧತಿಗಳಿಗೆ ಬಲಿಯಾಗದಿರಲು ಸರ್ಕಾರದ ಪ್ರಜ್ಞಾವಂತ ನಾಗರಿಕರ ಸಂಘ-ಸಂಸ್ಥೆಗಳ ಸಹಾಯ ಸಹಕಾರ ಪಡೆದು ಪುನರ್ವಸತಿ ಹೊಂದಬೇಕಿದೆ. ಇಲ್ಲದೆ ನಾನಾ ಕಾರಣದಿಂದಾಗಿ ನಡೆಯುವ ಮುತ್ತು ಕಟ್ಟುವ ದೇವದಾಸಿ ವೇಶಾವಾಟಿಕೆ ಇಂತಹ ಅನಿಷ್ಟ ಪದ್ಧತಿಗಳನ್ನು ಕೈಬಿಟ್ಟು ಸರ್ಕಾರ ನೀಡಿದ ಯೋಜನೆಯನ್ನು ಸದುಪಯೋಗ ಪಡೆದುಕೊಂಡು ಮುಖ್ಯವಾಹಿನಿಗೆ ಬರಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ವಕೀಲರಾದ ಕೆ. ಸಣ್ಣ ನಿಂಗನಗೌಡ, ಎಂ.ನಾಗೇಂದ್ರಪ್ಪ, ಬಿ.ಸಿದ್ದೇಶ್, ತಾಲ್ಲೂಕು ಕಾನೂನು ಸೇವಾ ಸಮಿತಿಯ ಸದಸ್ಯರಾದ ಬಾಗಳಿ ಕೊಟ್ರೇಶ್, ಬಸವರಾಜ್ ಸೇರಿದಂತೆ ವಿಕಲಚೇತನರ ಅಧಿಕಾರಿಗಳು ಮತ್ತು ಇತರರು ಸಿಬ್ಬಂದಿಗಳು ಹಾಜರಿದ್ದರು.

error: Content is protected !!