ಕೆಲಸ ಮಾಡಲು ವಿಳಂಬ ಧೊರಣೆಯೂ ಲಂಚವಿದ್ದಂತೆ

ಕೆಲಸ ಮಾಡಲು ವಿಳಂಬ ಧೊರಣೆಯೂ ಲಂಚವಿದ್ದಂತೆ

ಜಗಳೂರಿನ ಶಾಸಕ ಬಿ. ದೇವೇಂದ್ರಪ್ಪ 

ಜಗಳೂರು, ಸೆ. 25 – ಅಧಿಕಾರಿಗಳು ಸಾರ್ವಜನಿಕರನ್ನು ಕಚೇರಿಗಳಿಗೆ ಅಲೆದಾಡಿಸಿದೆ ಸಕಾಲದಲ್ಲಿ ಕೆಲಸ ಮಾಡಿ ಕೊಡಬೇಕು. ಕೆಲಸ ಮಾಡಿಕೊಡಲು ಹಣ ಪಡೆದರೆ ಲಂಚ ಯಾವ ರೀತಿ ಆಗುತ್ತದೆಯೋ ಅದೇ ರೀತಿ ಮಾಡಲು ವಿಳಂಭದ ಧೊರಣೆ ಅನುಸರಿಸುವುದು ಸಹ ಲಂಚವಿದ್ದಂತೆ. ಹಾಗಾಗಿ ನಿಯಮದ ಪ್ರಕಾರ ಬಂದರೆ ಕೆಲಸ ಮಾಡಿಕೊಡಿ. ಇಲ್ಲದಿದ್ದಾರೆ ಹಿಂಬರಹ ಕೊಡಿ ವಿಳಂಬ ಧೋರಣೆ ಅನುಸರಿಸ ಬೇಡಿ ಎಂದು ಅಧಿಕಾರಿಗಳಿಗೆ ಶಾಸಕ ಬಿ. ದೇವೇಂದ್ರಪ್ಪ ಕಟ್ಟುನಿಟ್ಟಿನ ಸೂಚನೆ ನೀಡಿದರು.

ತಾಲ್ಲೂಕಿನ ದೇವಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕೊಡದ ಗುಡ್ಡ ಗ್ರಾಮದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಜನರ ಅಹವಾಲು, ಸ್ವೀಕರಿಸಿ ಅವರು ಮಾತನಾಡಿದರು.

ಹಲವು ಅಡೆತಡೆಗಳ ನಂತರ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಡಿ ಈಗಾಗಲೇ ತಾಲ್ಲೂಕಿನ 11 ಕೆರೆಗಳಿಗೆ ನೀರು ಬಂದಿದ್ದು, ಉಳಿದ ಕೆರೆಗಳಿಗೆ ಪೈಪ್ ಲೈನ್ ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದೆ. ವರ್ಷದಲ್ಲಿ 4 ತಿಂಗಳು ಮಾತ್ರ ನೀರು ದೊರೆಯಲಿದ್ದು, ನದಿ ಸಮೀಪ ಉತ್ತಮ ಮಳೆಯಾದರೆ ಮಾತ್ರ ನೀರು ದೊರೆಯಲಿದೆ ಆ ಭಾಗದಲ್ಲಿ ಮಳೆಯಾಗದಿದ್ದರೆ  ಕೆರೆಗಳಿಗೆ ನೀರು ಬರುವುದಿಲ್ಲ. ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದೆ ಎಂದವರು ಹೇಳಿದರು.

ಪ್ರಶ್ನೆಗಳ ಸುರಿಮಳೆಗೈದ ಗ್ರಾಮಸ್ಥರು : ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದ ಹಾವಳಿ ಹೆಚ್ಚಾಗಿದ್ದು, ಇದರ ಸೇವನೆಯಿಂದ ಯುವಕರು ದಾರಿ ತಪ್ಪುತ್ತಿದ್ದಾರೆ, ಕೃಷಿ ಇಲಾಖೆಯ ಸೌಲಭ್ಯಗಳು ಉಳ್ಳವರ ಪಾಲಾಗುತ್ತಿವೆ, ಇ-ಸ್ವತ್ತು ಅರ್ಜಿ ಸಲ್ಲಿಸಿ 2 ವರ್ಷವಾದರೂ ಕಾರ್ಯರೂಪಕ್ಕೆ ಬರುತ್ತಿಲ್ಲ ಗ್ರಾಮದಲ್ಲಿ ಸ್ವಚ್ಚತೆ ಕಣ್ಮರೆಯಾಗಿದ್ದು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಪ್ರಶ್ನೆಗಳ ಸುರಿಮಳೆಗೈದು ಶಾಸಕರು, ಅಧಿಕಾರಿಗಳ ಸಮ್ಮುಖದಲ್ಲೇ ಅಸಮಾಧಾನ ವ್ಯಕ್ತಪಡಿಸಿದರು. ಸ

ಗ್ರಾಮದಲ್ಲಿರುವ ಕೆರೆ ಕೋಡಿ ಬಿದ್ದು ನೀರೆಲ್ಲ ಬಡ ರೈತರ  ಜಮಿನುಗಳಿಗೆ ನುಗ್ಗುತ್ತಿದೆ ಮತ್ತು ಸುತ್ತಮುತ್ತಲಿನ ಪ್ರದೇಶ ಜೌಗು ಪ್ರದೇಶವಾಗಿದ್ದು ಸರಿಪಡಿಸುವಂತೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಇ-ಸ್ವತ್ತು ಮಾಡಿಕೊಡಲು ಸರ್ವೆ ಇಲಾಖೆಯವರು ಕೆಲಸ ಮಾಡಲು ಡಿಮ್ಯಾಂಡ್ ಮಾಡುತ್ತಿದ್ದಾರೆ ಎಂದು ಗ್ರಾಮದ ಮುಖಂಡ ಅನಂತ್ ಸಭೆಯ ಗಮನಕ್ಕೆ  ತಂದರು.

 ಕೆರೆ ಕೊಡಿ ಸರಿಪಡಿಸುವ ಬಗ್ಗೆ ಸಂಬಂಧಿಸಿದ ಅಭಿಯಂತರರಿಗೆ ತಹಶೀಲ್ದಾರ್ ಅರುಣ ಕಾರಗಿ ಅವರು ಸ್ಥಳದಲ್ಲೆ ಸೂಚನೆ ನೀಡಿದರು. ಸ್ಮಶನಕ್ಕೆ ಗ್ರಾಮದ ಸಮೀಪ 4 ಎಕರೆ ಜಮಿನು ಇದೆ. ಅಲ್ಲಿ  ಸ್ಮಶಾನದ ವ್ಯವಸ್ಥೆ ಮಾಡಿಸಲಾಗುವುದು. ಪ್ರತಿಯೊಬ್ಬ ರೈತರು  ರೈತ ಸಂಪರ್ಕ ಕೇಂದ್ರಗಳಿಗೆ ತೆರಳಿ ಇಕೆವೈಸಿ ಮಾಡಿಸಿದರೆ ಮಾತ್ರ ನಿಮ್ಮ ಖಾತೆಗಳಿಗೆ ಪ್ರಧಾನ ಮಂತ್ರಿ ಕಿಸಾನ ಸಮ್ಮಾನ್ ಹಣ ಬಿಳಲಿದೆ ರೈತರು ಇ-ಕೆವೈಸಿ ಮಾಡಿಸಿಕೊಳ್ಳಬೇಕು ತಹಶೀಲ್ದಾರ್ ತಿಳಿಸಿದರು.

ಪ್ರಚಾರದ ಕೊರತೆ ಬೆರಳೆಣಿಕೆಯಷ್ಟು ಜನ ಮಾತ್ರಬಾಗಿ : ಜನತಾ ದರ್ಶನ ಕಾರ್ಯಕ್ರಮದ ಬಗ್ಗೆ ಗ್ರಾಮ ಪಂಚಾಯತಿ ಹಾಗೂ ತಾಲ್ಲೂಕು ಆಡಳಿತದ ಅಧಿಕಾರಿಗಳು ಗ್ರಾ.ಪಂ. ವ್ಯಾಪ್ತಿಯ ಹಳ್ಳಿಗಳ ಜನರಿಗೆ ಮಾಹಿತಿ ನೀಡದೇ ಪ್ರಚಾರದ ಕೊರತೆಯಿಂ ದಾಗಿ ವೇದಿಕೆಯ ಮುಂಭಾಗದಲ್ಲಿ ವಿವಿಧ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂಧಿಗಳನ್ನು ಹೊರತುಪಡಿಸಿದರೆ ಬೆರಳೆಣಿಕೆಯಷ್ಟು ಜನ ಮಾತ್ರ ಬಗವಹಿಸಿದ್ದರು.

ಈ ಸಂಧರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಣದಮ್ಮ, ಉಪಾಧ್ಯಕ್ಷ ವಿರೇಶ್, ತಾ.ಪಂ. ಪ್ರಭಾರಿ ಇ.ಓ. ಕರಿಬಸವಯ್ಯ, ಎ.ಡಿ. ಚಂದ್ರಶೇಖರ್,  ತಾಲ್ಲೂಕು ಮಟ್ಟದ ಅಧಿಕಾರಿಗಳಾದ ಹಾಲಪ್ಪ,  ಬಿರೇಂದ್ರ ಕುಮಾರ್, ಲಿಂಗರಾಜ್, ತೋಟದಯ್ಯ, ಕೃಷಿ ಇಲಾಖೆಯ ಗಿರೀಶ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಷಂಷೀರ್, ಕೆಪಿಸಿಸಿ ಸದಸ್ಯ ಕಲ್ಲೇಶ್‍ರಾಜ್ ಪಟೇಲ್, ಅಹಮದ ಆಲಿ, ಪಿಡಿಓ ಸುನಿತಾ, ಬಸಾಪುರ ರವಿಚಂದ್ರ,  ಗುರುಸ್ವಾಮಿ ಮತ್ತಿತರರು ಹಾಜರಿದ್ದರು.

error: Content is protected !!