ಎಸ್.ಯು.ಜೆ.ಎಂ. ಕಾಲೇಜಿನಲ್ಲಿ ಕಲ್ಯಾಣ ಕರ್ನಾಟಕ ಉತ್ಸವ

ಎಸ್.ಯು.ಜೆ.ಎಂ. ಕಾಲೇಜಿನಲ್ಲಿ ಕಲ್ಯಾಣ ಕರ್ನಾಟಕ ಉತ್ಸವ

ಹರಪನಹಳ್ಳಿ, ಸೆ. 17 – 1948 ಸೆಪ್ಟೆಂಬರ್ 17ರಂದು ದಕ್ಷಿಣ ಪ್ರಸ್ಥಭೂಮಿಗೆ ಹಿಡಿದ ಗ್ರಹಣ ಬಿಟ್ಟ ದಿನ. ಅಹಿಂಸಾತ್ಮಕ ಹೋರಾಟ ಮಾಡಿ ನಿಜಾಮರಿಂದ ಮುಕ್ತಿ ಹೊಂದಲು ಶ್ರೀ ರಾಮಾನಂದ ತೀರ್ಥರು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು ಎಂದು ಉಪನ್ಯಾಸಕ ಎಸ್. ಚೆನ್ನಬಸಪ್ಪ ಅಭಿಪ್ರಾಯ ಪಟ್ಟರು. 

ಪಟ್ಟಣದ ಎಸ್.ಯು.ಜೆ.ಎಂ. ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಈ ದಿನ ನಾವು ಗುಲಾಮಗಿರಿ ಯಿಂದ ಪಾರಾದ ದಿನ. ತ್ಯಾಗ, ಬಲಿದಾನಗಳ ಮೂಲಕ ಹೈದರಾಬಾದ್ ಕರ್ನಾಟಕದಿಂದ ವಿಮುಕ್ತಿ ಹೊಂದಿದ ದಿನ ಎಂದರು. 

ಗುಲಾಮಗಿರಿಯಿಂದ ಪಾರಾದ ದಿನ ಎಂದು ಹೈದರಾಬಾದ್ ಕರ್ನಾಟಕದ ಇತಿಹಾಸವನ್ನು ಬಿ. ಕೃಷ್ಣಮೂರ್ತಿ ವಿವರಿಸಿದರು.

ಕೆ ಬೀರನಾಯ್ಕ ಅವರು, ಹೈದರಾಬಾದ್ ಕರ್ನಾಟಕದ ಇತಿಹಾಸವನ್ನು ಬಿಡಿಬಿಡಿಯಾಗಿ ವಿವರಿಸಿ ವಿದ್ಯಾರ್ಥಿಗಳಿಗೆ ತಿಳಿಸಿದರು.

ಉಪನ್ಯಾಸಕ ಎಂ. ಚಿಕ್ಕಪ್ರಸಾದ್ ಮಾತನಾಡಿ, ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಅನುದಾನ ಸ್ಥಾನಮಾನ, ವಿಶೇಷ ಸೌಲಭ್ಯ ಮತ್ತು ಮೀಸಲಾತಿಯನ್ನು 371 ಜೆ ಸೌಲಭ್ಯವನ್ನು ಎಲ್ಲಾ ವಿದ್ಯಾರ್ಥಿಗಳು ಪಡೆಯಬೇಕು ಎಂದರು. 

ಕಾಲೇಜಿನ ಪ್ರಾಂಶುಪಾಲ ಹೆಚ್. ಮಲ್ಲಿಕಾರ್ಜುನ ಅವರು ಧ್ವಜಾರೋಹಣ  ನೆರವೇರಿಸಿ ಮಾತನಾಡಿ, ಭಾರತ ದೇಶಕ್ಕೆ ಆಗಸ್ಟ್ 15 1947 ರಲ್ಲಿ ಸ್ವಾತಂತ್ರ್ಯ ಸಿಕ್ಕರೆ ಕಲ್ಯಾಣ ಕರ್ನಾಟಕಕ್ಕೆ 13 ತಿಂಗಳ ನಂತರ ತಡವಾಗಿ ಸ್ವಾತಂತ್ರ್ಯ ಸಿಕ್ಕಿದೆ. ಹೈದರಾಬಾದ್ ಕರ್ನಾಟಕದ ಜನ ನಿಜಾಮರ ಆಳ್ವಿಕೆಯಲ್ಲಿ ಅನೇಕ ಕಷ್ಟ, ಸಾವು, ನೋವಿನಿಂದ ನರಳಿದ್ದಾರೆ,  ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲರಿಂದ ಸೆಪ್ಟೆಂಬರ್ 17 1948ರಲ್ಲಿ ನಮಗೆ ಸ್ವಾತಂತ್ರ್ಯ ದೊರೆಯಿತು. ಕಲ್ಯಾಣ ಕರ್ನಾಟಕದ ವಿಶೇಷಗಳೆಂದರೆ ರಾಯಚೂರಿನಲ್ಲಿ ಚಿನ್ನದ ಗಣಿ, ಕೊಪ್ಪಳದಲ್ಲಿ ಗ್ರಾನೈಟ್ ಗಣಿ, ಯಾದಗಿರಿಯಲ್ಲಿ ಯುರೇನಿಯಂ ನಿಕ್ಷೇಪಗಳಿವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿಶೇಷವಾದ ಉತ್ತಮವಾದ ಆಹಾರ ಧಾನ್ಯಗಳನ್ನು ಬೆಳೆಯುತ್ತಾರೆ. ಇಲ್ಲಿ ತುಂಗಭದ್ರಾ, ಕೃಷ್ಣಾ, ಭೀಮಾ ಇತ್ಯಾದಿ ನದಿಗಳು ಹರಿದರೂ ಕೃಷಿ ಭೂಮಿಗೆ ಮತ್ತು ಕುಡಿಯಲು ನೀರಿಲ್ಲದೆ ಜನ ನರಳುವಂತಹ ಸ್ಥಿತಿ ಉಂಟಾಗಿದೆ ಎಂದು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಎಚ್.ಬಿ ಸೋಮರೆಡ್ಡಿ, ಟಿ ಎಂ ಜಯದೀಪ, ಶ್ರೀಮತಿ ಶೈಲಜಾ ಇದ್ದರು.

error: Content is protected !!