ದಾವಣಗೆರೆ ವಿಶ್ವವಿದ್ಯಾನಿಲಯ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಚಿತ್ರೋತ್ಸವ-2023ರ ಅಂಗವಾಗಿ ಗುರುವಾರ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗಿಯಾಗಿರುವ ವಿದ್ಯಾರ್ಥಿನಿಯರು.
ದೃಶ್ಯ ಕಲಾ ಮಹಾವಿದ್ಯಾಲಯದಲ್ಲಿ ಚಿತ್ರ, ರಂಗೋಲಿ ವೈಭವ
ದಾವಣಗೆರೆ, ಸೆ. 15- ಚಿತ್ರೋತ್ಸವ-2023 ಅಂಗವಾಗಿ ಇಲ್ಲಿನ ದೃಶ್ಯ ಕಲಾ ಮಹಾವಿದ್ಯಾಲಯದಲ್ಲಿ ಜಿಲ್ಲೆಯಪದವಿ ಪೂರ್ವ ಹಾಗೂ ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳಿಗೆ ಚಿತ್ರ ಕಲೆ ಹಾಗೂ ರಂಗೋಲಿ ಬರೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು.
ದಾವಿವಿ ಕಲಾ ನಿಕಾಯ ಡೀನ್ ಡಾ.ವೆಂಕಟರಾವ್ ಪಲಾಟೆ ಚಿತ್ರ ಬರೆಯುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದರು. ಮೌಂಟೇಜ್ ಪೋಟೊಗ್ರಪಿ ಕುರಿತು ಉಪನ್ಯಾಸ ನೀಡಲು ಆಗಮಿಸಿದ ಪ್ರಾಣೇಶ್ ಕುಲಕರ್ಣಿ, ದೃಶ್ಯ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಜೈರಾಜ ಎಂ.ಚಿಕ್ಕಪಾಟೀಲ, ಸಹಾಯಕ ಪ್ರಾಧ್ಯಾಪಕ ಡಾ.ಸತೀಶ್ ಕುಮಾರ್ ಪಿ.ವಲ್ಲೇಪುರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕು.ಶೃತಿ ರಾಯ್ಕರ್ ನಿರೂಪಿಸಿದರು. ಮೋನಿಕಾ ಪ್ರಾರ್ಥಿಸಿದರು. ಸ್ನೇಹ ಸ್ವಾಗತಿಸಿದರು. ಅರುಣ್ ಹಂಚಿನಾಳ ವಂದಿಸಿದರು.