ಚನ್ನಗಿರಿ, ಆ. 30- ತಾಲ್ಲೂಕಿನ ಕತ್ತಲಗೆರೆ ಗ್ರಾಮ ಪಂಚಾಯತಿ ವತಿಯಿಂದ ಗ್ರಾಮದ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ `ಗೃಹಲಕ್ಷ್ಮಿ’ ಯೋಜನೆಗೆ ಚಾಲನೆ ನೀಡಲಾಯಿತು.
ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಎಂ. ಮಂಜಪ್ಪ ಅಧ್ಯಕ್ಷತೆ ವಹಿಸಿದ್ದು, ಗ್ರಾ.ಪಂ. ಮಾಜಿ ಉಪಾಧ್ಯಕ್ಷರೂ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಡಿ. ತಿಪ್ಪಣ್ಣ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಮಾಜಿ ಅಧ್ಯಕ್ಷರೂ, ಹಾಲಿ ಸದಸ್ಯರಾದ ಜೆ.ಎನ್. ಬಸವನಗೌಡ, ತಾ.ಪಂ. ಮಾಜಿ ಸದಸ್ಯ ಶಂಕರ್ ಪಾಟೀಲ್, ಇನ್ಸೈಟ್ಸ್ ಐಎಎಸ್ ಸಂಸ್ಥೆ ಸಂಸ್ಥಾಪಕ ಜಿ.ಬಿ. ವಿನಯ್ ಕುಮಾರ್, ಕತ್ತಲಗೆರೆ ಗ್ರಾಮದ ಮುಖಂಡ ಅಂಗಡಿ ಕರಿಯಣ್ಣ, ಪ್ರಕಾಶ್, ಶಶಿಕುಮಾರ್, ಲೋಕೇಶ್ ಕುಮಾರ್ ಕವಳಿ ತಾಂಡಾ, ಬಾಲಜ್ಜರ ತಿಪ್ಪೇಶ್, ಮಾರುತಿ ಹುಗ್ಗಿ, ಗುರು ಪಾಟೀಲ್ ಇನ್ನಿತರರು ಭಾಗಿಯಾಗಿದ್ದರು.