ಮಲೇಬೆನ್ನೂರು, ಆ.23- ಹರಳಹಳ್ಳಿ ಗ್ರಾ.ಪಂ. ನೂತನ ಅಧ್ಯಕ್ಷರಾಗಿ ಎಂ.ಹೆಚ್.ಹನುಮಂತಪ್ಪ ಮತ್ತು ಉಪಾಧ್ಯಕ್ಷರಾಗಿ ಮಲ್ಲಾನಾಯ್ಕನಹಳ್ಳಿಯ ಶ್ರೀಮತಿ ನಾಗಮ್ಮ ರಾಮಾಂಜನೇಯ ಅವರು ಬುಧವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನ ಎಸ್ಸಿಗೆ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಜಿ.ಪಂ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಗಿರೀಶ್ ಚುನಾವಣಾಧಿಕಾರಿಯಾಗಿದ್ದರು.
ಪಿಡಿಓ ಕೆ.ಬಿ.ಶಾಂತಪ್ಪ ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಿದರು. ತಾ.ಪಂ.ಮಾಜಿ ಅಧ್ಯಕ್ಷ ಎಸ್.ಜಿ.ಪರಮೇಶ್ವರಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್, ಕೆ.ಪಿ.ಗಂಗಾಧರ್, ಪಿ.ಹೆಚ್.ಶಿವಕುಮಾರ್, ಪೂಜಾರ್ ದೇವರಾಜ್, ಕುಂಬಳೂರು ವಾಸು, ಮಲ್ಲನಾಯ್ಕನಹಳ್ಳಿ ಸಣ್ಣ ಶೇಖರಪ್ಪ ಸೇರಿದಂತೆ ಗ್ರಾ.ಪಂ. ಸರ್ವ ಸದಸ್ಯರು ಈ ವೇಳೆ ಹಾಜರಿದ್ದರು.