ಸಿರಿಗೆರೆ, ಆ.20- ದಿಟ್ಟ ಪತ್ರಿಕೋದ್ಯಮಿ, ಹೋರಾಟಗಾರ, ಅನನ್ಯ ಸಂಘಟಕ ಆರ್.ಟಿ. ಮಜ್ಜಗಿ ನಿಧನಕ್ಕೆ ತರಳಬಾಳು ಜಗದ್ಗುರು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಸಂತಾಪ ವ್ಯಕ್ತಪಡಿಸಿದ್ದಾರೆ. ಹಿರಿಯ ಗುರುಗಳಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿ ಅವರ ಮೆಚ್ಚಿನ ಶಿಷ್ಯರಾಗಿದ್ದ ಆರ್. ಟಿ. ಮಜ್ಜಗಿ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ವಿಶ್ವಬಂಧು ಮರಳುಸಿದ್ದರಲ್ಲಿ ಪ್ರಾರ್ಥಿಸುತ್ತೇವೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.
December 3, 2024