2ನೇ ದಿನಕ್ಕೆ ದಿನಗೂಲಿ ನೌಕರರ ಪ್ರತಿಭಟನೆ

2ನೇ ದಿನಕ್ಕೆ ದಿನಗೂಲಿ ನೌಕರರ ಪ್ರತಿಭಟನೆ

ವೇತನ ನೀಡುವವರೆಗೂ ಪ್ರತಿಭಟನೆ ಕೈ ಬಿಡಲ್ಲ : ನೌಕರರ ಬಿಗಿಪಟ್ಟು

ಮಲೇಬೆನ್ನೂರು, ಆ. 17 – ಇಲ್ಲಿನ ಭದ್ರಾ ನಾಲಾ ನಂ.3 ವಿಭಾಗದ ದಿನಗೂಲಿ ನೌಕರರು ಬಾಕಿ ವೇತನಕ್ಕೆ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆ ಗುರುವಾರ 2ನೇ ದಿನಕ್ಕೆ ಕಾಲಿಟ್ಟಿತು. ದಿನಗೂಲಿ ನೌಕರರ ಸಂಘದ ಅಧ್ಯಕ್ಷ ಎ.ಕೆ. ಆಂಜನೇಯ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿರುವ 150ಕ್ಕೂ ಹೆಚ್ಚು ದಿನಗೂಲಿ ನೌಕರರು ಬಾಕಿ ವೇತನ ಬಿಡುಗಡೆ ಮಾಡುವವರೆಗೂ ಪ್ರತಿಭಟನೆ ಕೈ ಬೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ದಿನಗೂಲಿ ನೌಕರರಿಗೆ ವೇತನ ನೀಡುವ ಏಜೆನ್ಸಿಗಾಗಿ ಟೆಂಡರ್‌ ಕರೆದಿದ್ದು, ಟೆಂಡರ್‌ ಓಪನ್‌ ಆಗಿಲ್ಲ. ಹಾಗಾಗಿ ವೇತನ ಬಿಡುಗಡೆ ವಿಳಂಬವಾಗಿದೆ ಎಂದು ಭದ್ರಾ ನಾಲಾ ನಂ-3 ವಿಭಾಗದ ಇಇ ಜಿ.ಎಸ್‌. ಪಟೇಲ್‌ ತಿಳಿಸಿದರು.

ಈ ಸಮಸ್ಯೆ ಕುರಿತು ಭದ್ರಾ ಅಧೀಕ್ಷಕ ಇಂಜಿನಿಯರ್‌ ಸುಜಾತ ಅವರೊಂದಿಗೆ ಮೊಬೈಲ್‌ ಮೂಲಕ ಮಾತನಾಡಿದ ಜಿ.ಎಸ್‌. ಪಟೇಲ್‌ ಅವರು ದಿನಗೂಲಿ ನೌಕರರ ವೇತನದ ಟೆಂಡರನ್ನು ನೀರಾವರಿ ನಿಗಮಕ್ಕೆ ಕಳುಹಿಸುವಂತೆ ಹೇಳಿದರು. ನಂತರ ದಿನಗೂಲಿ ನೌಕರರ ಸಂಘದ ಎ.ಕೆ. ಆಂಜನೇಯ ಕೂಡ ಸುಜಾತ ಅವರೊಂ ದಿಗೆ ಮಾತನಾಡಿ 5 ತಿಂಗಳನಿಂದ ವೇತನ ಇಲ್ಲದೇ ಪರ ದಾಡುತ್ತಿದ್ದೇವೆ. ಆದಷ್ಟು ಬೇಗ ವೇತನ ಕೊಡಿಸಿ ಇಲ್ಲದಿದ್ದರೆ ಪ್ರತಿಭಟನೆ ತೀವ್ರಗೊಳಿಸುವುದಾಗಿ ತಿಳಿಸಿದರು.

ದಿನಗೂಲಿ ನೌಕರರ ಹೋರಾಟಕ್ಕೆ ಬೆಂಬಲ ನೀಡಿರುವ ಶಾಸಕರಾದ ಬಿ.ಪಿ. ಹರೀಶ್‌, ಡಿ.ಜಿ. ಶಾಂತನಗೌಡರು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಕೂಡಲೇ ಬಾಕಿ ವೇತನ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

error: Content is protected !!