ಬಿ.ಎಸ್ಸಿ ಭಾರತದಲ್ಲಿ ಅತ್ಯಂತ ಜನಪ್ರಿಯ ಪದವಿಗಳಲ್ಲೊಂದು

ಬಿ.ಎಸ್ಸಿ ಭಾರತದಲ್ಲಿ ಅತ್ಯಂತ ಜನಪ್ರಿಯ ಪದವಿಗಳಲ್ಲೊಂದು

ಹರಪನಹಳ್ಳಿ ಕಾರ್ಯಕ್ರಮದಲ್ಲಿ ರೇವು ವಿಶ್ವವಿದ್ಯಾಲಯದ ಗಣಿತ ವಿಭಾಗದ ಮುಖ್ಯಸ್ಥ ಡಾ.ಎಂ. ವಿಶುಕುಮಾರ

ಹರಪನಹಳ್ಳಿ, ಜೂ.26- ಬ್ಯಾಚುಲರ್ ಅಫ್ ಸೈನ್ಸ್ ಭಾರತದಲ್ಲಿ ಅತ್ಯಂತ ಜನಪ್ರಿಯ ಪದವಿಗಳಲ್ಲಿ ಒಂದಾಗಿದೆ ಎಂದು ರೇವು ವಿಶ್ವವಿದ್ಯಾಲಯದ ಗಣಿತ ವಿಭಾಗದ ಮುಖ್ಯಸ್ಥ ಡಾ.ಎಂ. ವಿಶುಕುಮಾರ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಿಂದ ಬಿ.ಎಸ್ಸಿ. ವಿದ್ಯಾರ್ಥಿಗಳಿಗೆ ಪದವಿ ನಂತರ ಮುಂದಿನ ಶಿಕ್ಷಣದ ಕುರಿತು ಆತ್ಮ ವಿಶ್ವಾಸ ತುಂಬುವ  ವಿಶೇಷ ಉಪನ್ಯಾಸ ನೀಡಿದರು.

ವಿವಿಧ ವೃತ್ತಿಪರ ಆಯ್ಕೆಗಳಿಗೆ ಬಿ.ಎಸ್ಸಿ. ಕಾರಣವಾಗುತ್ತದೆ. ಉನ್ನತ ಶಿಕ್ಷಣಕ್ಕಾಗಿ ವಿವಿಧ ವಿಷಯದ ಆಯ್ಕೆಗಳನ್ನು ಹೊಂದಬಹುದು. ನಿಮ್ಮ ವೃತ್ತಿ ಜೀವನದಲ್ಲಿ ಮುನ್ನಡೆಯಲು ಎಂ.ಎಸ್ಸಿ. ಪದವಿಯನ್ನು ಸಾಮಾನ್ಯವಾಗಿ ಆಯ್ಕೆ ಮಾಡಿಕೊಳ್ಳಬಹುದು. ಜೊತೆಗೆ ಬಿ.ಇಡಿ. ಮಾಡಬಹದು ಎಂದು ಸಲಹೆ ನೀಡಿದರು.

ಪ್ರಾಧ್ಯಾಪಕ ಡಾ.ಬಿ.ಎನ್. ಹನುಮಗೌಡ ಮಾತನಾಡಿ, ಬಿ.ಎಸ್ಸಿ. ಪದವಿ ನಂತರ ಡೇಟಾ ಸೈನ್ಸ್  ಡೇಟಾ ದೃಶ್ಯೀಕರಣ, ಹಣಕಾಸು ಎಂಜಿನಿಯರಿಂಗ್ ಮತ್ತು ಕೃತಕ ಬುದ್ದಿಮತ್ತೆ, ನೈಸರ್ಗಿಕ ಭಾಷಾ ಸಂಸ್ಕರಣೆ, ಪೈಥಾನ್. ಹಾಸ್ಪಿಟಾಲಿಟಿ ಮ್ಯಾನೇಜ್ ಮೆಂಟಿನಲ್ಲಿ ಎಂ.ಬಿ.ಎ. ಮಾಹಿತಿ ತಂತ್ರಜ್ಞಾನದಲ್ಲಿ ಎಂ.ಬಿ.ಎ. ಬಿ.ಸಿ.ಎ. ಎಂ.ಸಿ.ಎ ಮಾಡಬಹುದು. ನೀವು ಸ್ವಂತ ವೃತ್ತಿ ಮಾಡಬೇಕು ಎಂದರೆ  ತೈಲ ಉದ್ಯಮ. 

ಕೃಷಿ ಉದ್ಯಮ, ಶಿಕ್ಷಣ ಸಂಸ್ಥೆಗಳು. ಆಹಾರ ಸಂಸ್ಥೆಗಳು, ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು, ಆಸ್ವತ್ರೆಗಳು ಸೇರಿದಂತೆ ಅನೇಕ ತರಹದ ಸ್ವ ಉದ್ಯೋಗಗಳನ್ನು ಮಾಡುವ ಮೂಲಕ ಸ್ವಾವಲಂಬನಿಯಾಗಿ ಇರಬಹುದು ಎಂದರು.

ಸಮಾರಂಭದ ಅಧ್ಯಕ್ಷತೆ  ವಹಿಸಿ ಮಾತನಾಡಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎಸ್.ಷಣ್ಮುಖನಗೌಡ, ನಾನೂ ಕೂಡ ವಿಜ್ಞಾನದ ವಿದ್ಯಾರ್ಥಿಯಾಗಬೇಕು ಎಂದು ತುಂಬಾ ಪ್ರಯತ್ನ ಮಾಡಿದರೂ ಆಗಲಿಲ್ಲ. ಅದರೂ ಕೂಡ ಸೈನ್ಸ್‌ ವಿದ್ಯಾರ್ಥಿಗಳೆಂದರೆ ನನಗೆ ತುಂಬಾ ಇಷ್ಟ. ನೀವುಗಳು ಸ್ವ ಉದ್ಯೋಗ ಮಾಡಲು ಅನೇಕ ಅವಕಾಶಗಳಿವೆ ಎಂದರು.

 ಈ ವೇಳೆ ಪ್ರಾಧ್ಯಾಪಕ ಡಾ.ಬಿ.ಟಿ.  ರಾಜು, ಸಹಾಯಕ ಪ್ರಾಧ್ಯಾಪಕ ಡಾ.ಜೆ.ಸಂತೋಷಕುಮಾರ್‌, ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ತಿಪ್ಪೇಸ್ವಾಮಿ,  ದೈಹಿಕ ಶಿಕ್ಷಣ ನಿರ್ದೇಶಕರಾದ  ಎಚ್.ಕೊಟ್ರೇಶ್‌, ಉಪನ್ಯಾಸಕರಾದ  ನಾಗರಾಜ, ಕೆ.ಸತೀಶ, ಶಂಭುಲಿಂಗಪ್ಪ, ಗ್ರಂಥಪಾಲಕರಾದ ನಾಗರತ್ನ ಹೊಸಮನಿ ಸೇರಿದಂತೆ, ಇತರರು ಇದ್ದರು.

error: Content is protected !!