ಛಾಪಾ ಕಾಗದಕ್ಕಾಗಿ ನೂಕು ನುಗ್ಗಲು

ಛಾಪಾ ಕಾಗದಕ್ಕಾಗಿ ನೂಕು ನುಗ್ಗಲು

ಮಲೇಬೆನ್ನೂರು, ಜೂ.20- ಇಲ್ಲಿನ ಪುರಸಭೆ ವತಿಯಿಂದ ಆಶ್ರಯ ಯೋಜನೆಯಡಿ ಪಟ್ಟಣದಲ್ಲಿ ವಾಸಿಸುವ ವಸತಿ ರಹಿತರಿಗೆ ವಸತಿ / ನಿವೇಶನ ಯೋಜನೆಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ನಮೂನೆಯೊಂದಿಗೆ 20 ರೂ. ಛಾಪಾ ಕಾಗದವನ್ನು ನೋಟರಿ ಮಾಡಿಸಿಕೊಂಡು ಬರುವಂತೆ ಹೇಳಲಾಗಿದ್ದು, ವಸತಿ – ನಿವೇಶನಕ್ಕಾಗಿ ಅರ್ಜಿ ಸಲ್ಲಿಸುವವರು ಛಾಪಾ ಕಾಗದಕ್ಕಾಗಿ ಇಲ್ಲಿನ ನಂದಿ ಸೌಹಾರ್ದ ಸಹಕಾರಿ ಮತ್ತು ಶಿವ ವಿವಿಧೋದ್ಧೇಶ ಸಹಕಾರ ಸಂಘ ಸೇರಿದಂತೆ ವಿವಿಧೆಡೆ ಮುಗಿ ಬಿದ್ದಿದ್ದರು. 

ಅರ್ಜಿ ಸಲ್ಲಿಸಲು ಜುಲೈ 10 ರವರೆಗೆ ಅವಕಾಶ ಇರುವುದರಿಂದ ಅವಸರ ಮಾಡಬೇಡಿ ಎಂದು ಪುರಸಭೆ ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!