ಮಲೇಬೆನ್ನೂರು, ಜೂ. 4 – ಧೂಳೆಹೊಳೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2023-24ನೇ ಸಾಲಿನ ಶಾಲಾ ಪ್ರಾರಂಭೋತ್ಸವದ ಪ್ರಯುಕ್ತ ಶಾಲಾ ಮಕ್ಕಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ಅವರು ಪಠ್ಯ ಪುಸ್ತಕ ಹಾಗೂ ಸಮವಸ್ತ್ರ ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಇಲಾಖೆಯ ಬಿ. ಆರ್. ಪಿ. ವೀರಪ್ಪ, ಸಿ. ಆರ್. ಪಿ. ಸತೀಶ್ ಕುಮಾರ್, ಮುಖ್ಯ ಶಿಕ್ಷಕ ಬಸವರಾಜಪ್ಪ, ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ಮುದ್ದೇರ ಹನುಮಂತಪ್ಪ, ಗ್ರಾಮಸ್ಥರಾದ ಕೆ. ಜಿ. ರಾಜು, ಮಹೇಂದ್ರ ಕುಮಾರ್, ಸಂತೋಷ್ ಕುಮಾರ್ , ರಮೇಶ್, ಶರಣ್ ಕುಮಾರ್ ಹೆಗಡೆ, ಕೆ ಮಂಗಳ, ಲೈಕ ಬಾನು, ಹೇಮಾ ಹಾಜರಿದ್ದರು.
January 15, 2025